Breaking News

ಗಜಪತಿ ಗ್ರಾಮದಲ್ಲಿ ಬೆಳಗ್ಗೆ ಬಸ್ ನಿಲ್ಲಿಸದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು

Spread the love

ಬೆಳಗಾವಿ ತಾಲೂಕಿನ ಗಜಪತಿ ಗ್ರಾಮದಲ್ಲಿ ಬೆಳಗ್ಗೆ ಬಸ್ ನಿಲ್ಲಿಸದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು. ಹಾಗೂ ಗಜಪತಿ ಗ್ರಾಮಕ್ಕೆ ಪ್ರತ್ಯೇಕ ಬಸ್ ಬಿಡುವಂತೆ ಒತ್ತಾಯಿಸಿದರು.

ಬೆಳಗಾವಿ ತಾಲೂಕಿನ ಗಜಪತಿ ಗ್ರಾಮದಲ್ಲಿ ಬೆಳಗ್ಗೆ ಬಸ್ ನಿಲ್ಲಿಸದ ಕಾರಣ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮುಂಜಾನೆಯೇ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ ನಿಲ್ಲುತ್ತಾರೆ. ಆದರೆ ಹಿಂದಿನ ಗ್ರಾಮದಿಂದ ಮುಗುಳಿಗಲ್ ,ಬಿಡಿ ಗ್ರಾಮದಿಂದ ಬೆಳಗಾವಿಗೆ ಹೋಗುವ ಬಸ್ ಗಳು ತುಂಬಿರುವುದರಿಂದ ಬಸ್ ಚಾಲಕರು ಗಜಪತಿ ಗ್ರಾಮದಲ್ಲಿ ಬಸ್ ನಿಲ್ಲಿಸುವುದಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ


Spread the love

About Laxminews 24x7

Check Also

ಹುಟ್ಟುಹಬ್ಬದ ಸಂಭ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್: ಬೆಳಗಾವಿಯಲ್ಲಿ 2 ಕೋಟಿ ವೆಚ್ಚದ ಭವ್ಯ ಶಿವ ದೇಗುಲ ಲೋಕಾರ್ಪಣೆ!

Spread the loveಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಇಂದು ತಮ್ಮ ಜನ್ಮದಿನದ ಅಂಗವಾಗಿ ಬೆಳಗಾವಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ