Breaking News
Home / ರಾಜಕೀಯ / ಬಿಎಸ್​ವೈ ಭೇಟಿಯಾದ ರೇಣುಕಾಚಾರ್ಯ; ಟೀಕಾಪ್ರಹಾರ ಮುಂದುವರಿಸಿದ ಮಾಜಿ ಶಾಸಕ

ಬಿಎಸ್​ವೈ ಭೇಟಿಯಾದ ರೇಣುಕಾಚಾರ್ಯ; ಟೀಕಾಪ್ರಹಾರ ಮುಂದುವರಿಸಿದ ಮಾಜಿ ಶಾಸಕ

Spread the love

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಬಳಿಕವೂ ಬಿಜೆಪಿ ನಾಯಕರ ವಿರುದ್ದ ತಮ್ಮ ಟೀಕಾಪ್ರಹಾರ ಮುಂದುರಿಸಿರುವ ಎಂ.ಪಿ. ರೇಣುಕಾಚಾರ್ಯ, ಯಡಿಯೂರಪ್ಪರನ್ನು ಷಡ್ಯಂತ್ರ ಮಾಡಿ ಎರಡು ಬಾರಿ ಅಧಿಕಾರದಿಂದ ಇಳಿಸಿದರು ಎಂದು ವಾಗ್ದಾಳಿ ನಡೆಸಿದರು.

 

ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮಾತನಾಡಿದ ಅವರು, ಬಿಎಸ್ ವೈ ಪಾದಯಾತ್ರೆ ಪ್ರತಿಫಲವಾಗಿ ಬಿಜೆಪಿ ಈ ಮಟ್ಟಕ್ಕೆ ಬೆಳೆದಿದೆ. ಅವರು ಬಿಜೆಪಿಯ ಅಗ್ರಮಾನ್ಯ ನಾಯಕ. ಅಂತಹವರನ್ನು ಷಡ್ಯಂತ್ರ ಮಾಡಿ ಎರಡು ಬಾರಿ ಇಳಿಸಿದ್ರು. ಕಾಂಗ್ರೆಸ್ – ಜೆಡಿಎಸ್ ನವರು ಯಡಿಯೂರಪ್ಪ, ಮೋದಿ ನೋಡಿ ಪಕ್ಷಕ್ಕೆ ಬಂದರು. ಅವರನ್ನು ಉಪ ಚುನಾವಣೆಗಳಲ್ಲಿ ಗೆಲ್ಲಿಸಿದರು. ಅಂತಹ ನಾಯಕರ ವಿರುದ್ಧ ‌ಮಾತಾಡಿದ್ರೆ ನೋಟಿಸ್ ಇಲ್ಲ. ಯಡಿಯೂರಪ್ಪ ನಮ್ಮ ನಾಯಕರು, ಗೌರವ ಕೊಡ್ತೇನೆ ಎಂದರು.

ಅವರಿಗೆ ಅವಮಾನ, ಅಪಮಾನ ಮಾಡಿದ್ರು. ಬಿಎಸ್ ವೈ ಪಾಪ ಗೌರವದಿಂದ ರಾಜೀನಾಮೆ ನೀಡಿದ್ರು. ಇನ್ನು ಮೈಸೂರು ಸಂಸದರದ್ದು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಆಗಿದೆ. ಒಬ್ಬ ಮಹಾನ್ ನಾಯಕನಿಗೆ ಅಪಮಾನ ಮಾಡೋದು ಸರಿಯಲ್ಲ ಎಂದು ರೇಣುಕಾಚಾರ್ಯ ಕಿಡಿಕಾರಿದರು.

ನೋಟಿಸ್​ಗೆ ಹೆದುರುವುದಿಲ್ಲ: ನೋಟಿಸ್​ಗೆಲ್ಲಾ ನಾನು ಹೆದರಿ ಬಿಡ್ತೀನಾ?. ನಂಗೆ ನೋಟೀಸ್ ಕೊಟ್ಟಿರೋದನ್ನು ಹೇಳ್ತೀರಿ. ಕಟೀಲ್ ಹೇಳ್ತಾರೆ 11 ಮಂದಿಗೆ ನೋಟೀಸ್ ಕೊಟ್ಟಿದ್ದೀವೆ ಅಂತ. ಉಳಿದ ಹತ್ತು ಮಂದಿ ಯಾರು..? ಎಲ್ಲಿ ನೋಟೀಸ್ ಕೊಟ್ಟಿದ್ದೀರಿ ಎಂದು ಮತ್ತೆ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಜೆ.ಪಿ.ನಡ್ಡಾ ಭೇಟಿ ಮಾಡುತ್ತೇವೆ: ನಡ್ಡಾ, ಮೋದಿ, ಶಾ ಗೆ ಪತ್ರ ಬರೆಯುತ್ತೇವೆ. ಜೆ.ಪಿ.ನಡ್ಡಾ ಭೇಟಿ ಮಾಡುತ್ತೇವೆ. ಬಿಜೆಪಿ ಹೀನಾಯ ಸೋಲಿಗೆ ಕಾರಣ ಏನು ಅಂತಾ ಹೇಳ್ತೇನೆ. ನಮ್ಮ ಸರ್ಕಾರ ತಪ್ಪು ನಿರ್ಧಾರಗಳ ಬಗ್ಗೆ ಸಲಹೆ ಕೊಡುತ್ತೇನೆ. ಆತ್ಮಾವಲೋಕನ ಮಾಡಿಕೊಳ್ಳಲ್ಲ. ನಿಮಗೆ ಅಪಮಾನ ಮಾಡಿದ್ರೆ ನಾನು ಸುಮ್ಮನಿರಲ್ಲ ಅಂತಾ ಹೇಳಿದ್ದೇನೆ. ಎಲ್ಲಾರು ಒಟ್ಟಾಗಿ ಹೋಗೋಣ ಅಂತಾ ಯಡಿಯೂರಪ್ಪ ಹೇಳಿದ್ರು. ಬಿಎಸ್​ವೈಗೆ ಎಲ್ಲಾ ಗೊತ್ತಿದೆ. ಮೋದಿ, ಬಿಎಸ್​ವೈ ಮುಖ ನೋಡಿ ವೋಟ್ ಕೇಳಿದ್ದೇವೆ ಎಂದು ಹೇಳಿದರು.

ಇವ್ರ ಕೊಡುಗೆ ಏನು, ಸಂಘಟನೆ ಮಾಡಿದ್ದಾರಾ?. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ಮುಂದೆ ಬಹಿರಂಗವಾಗಿ ಮಾತಾಡಬೇಡ ಅಂತಾ ಹೇಳಿದ್ರು. ನಾನು ಯಡಿಯೂರಪ್ಪಗೆ ಗೌರವ ಕೊಡುತ್ತೇನೆ. ಕೇಂದ್ರದ ನಾಯಕರನ್ನ ಭೇಟಿ ಮಾಡಿ, ಸೋಲಿಗೆ ಕಾರಣ ಯಾರು ಅಂತಾ ಹೇಳುತ್ತೇನೆ ಎಂದರು.


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ