Breaking News
Home / ರಾಜಕೀಯ / ಬೇರೆಯವರಿಗೆ ಹೊರೆಯಾಗಬಾರದೆಂದು 15 ವರ್ಷದ ಹಿಂದೆಯೇ ಸಮಾಧಿ ಮಾಡಿಕೊಟ್ಟುಕೊಂಡಿದ್ದ ಅಜ್ಜ…

ಬೇರೆಯವರಿಗೆ ಹೊರೆಯಾಗಬಾರದೆಂದು 15 ವರ್ಷದ ಹಿಂದೆಯೇ ಸಮಾಧಿ ಮಾಡಿಕೊಟ್ಟುಕೊಂಡಿದ್ದ ಅಜ್ಜ…

Spread the love

ಕಲಬುರಗಿ: ತನ್ನ ಸಾವಿನ ಬಳಿಕ ಯಾರಿಗೂ ಹೊರೆಯಾಗಬಾರದೆಂಬ ಉದ್ದೇಶದಿಂದ ಹಾವು ಕಚ್ಚಿದಾಗ ಸಾವಿಗೂ ಮುನ್ನ ಅಜ್ಜಿಯೊಬ್ಬಳು ತನ್ನ ಕೊರಳಲ್ಲಿನ ತಾಳಿ ಬಿಚ್ಚಿಕೊಟ್ಟು ಅಂತ್ಯ ಸಂಸ್ಕಾರಕ್ಕೆ ಬಳಕೆ ಮಾಡಿಕೊಳ್ಳುವಂತೆ ಹೇಳಿದ್ದ ಸುದ್ದಿಯೊಂದು ವರದಿಯಾಗಿತ್ತು.

ಇದೀಗ ಅದೇ ರೀತಿಯ ಮತ್ತೊಂದು ಸುದ್ದಿ ಜನರ ಗಮನ ಸೆಳೆಯುತ್ತಿದೆ. ತೀರಿಕೊಂಡ ಬಳಿಕ ಯಾರಿಗೂ ಹೊರೆ ಆಗೋದು ಬೇಡ ಅಂತ ಅಜ್ಜನೋರ್ವ ಬರೋಬ್ಬರಿ 15 ವರ್ಷಗಳ ಹಿಂದೆಯೇ ಗುಂಡಿ ತೆಗೆದಿದ್ದು, ಈಗ ಅವರನ್ನು ಅದೇ ಗುಂಡಿಯಲ್ಲಿ ಸಮಾಧಿ‌ ಮಾಡಲಾಗಿದೆ.

ವಯೋ ಸಹಜದಿಂದ ಮೃತರಾದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್.ಎನ್ ಗ್ರಾಮದ ಸಿದ್ದಪ್ಪ ದೇವರನಾವದಗಿ (96) ಎಂಬ ಅಜ್ಜನನ್ನು ಅವರೇ ತೆಗೆದಿದ್ದ ಗುಂಡಿಯಲ್ಲಿ ಅಂತ್ಯಸಂಸ್ಕಾರ ನೇರವೇರಿಸಲಾಗಿದೆ. ಕೃಷಿಕನಾಗಿದ್ದ ಅಜ್ಜ ಸಿದ್ದಪ್ಪಗೆ ಹಿಪ್ಪರಗಾ ಎಸ್.ಎನ್ ಗ್ರಾಮದಲ್ಲಿ 7 ಎಕರೆ ಜಮೀನಿದೆ. ಇದೆ ಜಮೀನಿನ ದಡದಲ್ಲಿ 15 ವರ್ಷದ ಹಿಂದೆಯೇ ಅಂತ್ಯಸಂಸ್ಕಾರಕ್ಕೆ ಸಮಾಧಿಯನ್ನು ಅಜ್ಜ ತೋಡಿದ್ದರು. ನಿತ್ಯ ಹೊಲದ ಕೆಲಸಕ್ಕೆಂದು ಹೋದಾಗ ಕೊಂಚ ಸಮಯ ಮೀಸಲಿಟ್ಟು ಖುದ್ದು ತಾವೊಬ್ಬರೇ ಅಕ್ಕಪಕ್ಕದಲ್ಲಿ ತಮಗೂ ಮತ್ತು ತಮ್ಮ ಹೆಂಡತಿಗಾಗಿ ಎರಡು ಸಮಾಧಿಗಳನ್ನು ತೋಡಿದ್ದರು.

15 ವರ್ಷಗಳಿಂದ ಕಾಪಾಡಿಕೊಂಡು ಬಂದ ಸಮಾಧಿ: ಹೀಗೆ ತೆಗೆದ ಸಮಾಧಿಗಳಿಗೆ ಸಿಮೆಂಟ್​ನಿಂದ ಪ್ಲಾಸ್ಟರ್ ಮಾಡಿ, ಸುಣ್ಣ ಬಣ್ಣ ಹಚ್ಚಿದ್ದರು. ಒಂದು ತನಗೆ ಇನ್ನೊಂದು ಸಮಾಧಿ ತನ್ನ ಮಡದಿಗೆ ಅಂತ ನಿಯೋಜನೆ ಮಾಡಿದ್ದರು. ಸಮಾಧಿ ತೋಡಿದ್ದು ಮಾತ್ರವಲ್ಲ ಅವುಗಳನ್ನು ಪೋಷಣೆ ಮಾಡುತ್ತ ಆಗಾಗ ಸ್ವಚ್ಛಗೊಳಿಸುತ್ತ ಬರೋಬ್ಬರಿ 15 ವರ್ಷಗಳಿಂದ ನಶಿಸದಂತೆ ನೋಡಿಕೊಂಡಿದ್ದರು. ತಾನು ಹಾಗೂ ತನ್ನ ಮಡದಿ ನಿಧನದ ನಂತರ ಇದೇ ಸಮಾಧಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುವಂತೆ ಗ್ರಾಮಸ್ಥರಿಗೆ ಕುಟುಂಬಸ್ಥರಿಗೆ ಮನವಿ ಕೂಡ ಮಾಡಿದ್ದರು.


Spread the love

About Laxminews 24x7

Check Also

ರಕ್ಷಾ ಬಂಧನ ದಿನಾಂಕ, ಶುಭ ಸಮಯ, ಮಹತ್ವವನ್ನು ತಿಳಿಯಿರಿ

Spread the love ರಕ್ಷಾ ಬಂಧನ ಸಹೋದರ ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾಗಿದೆ. ರಕ್ಷಾ ಬಂಧನ ಹಬ್ಬವನ್ನು ಪ್ರತಿ ವರ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ