ಕಳೆದ ನಾಲ್ಕು ತಿಂಗಳ ಹಿಂದೆ ಕಳುವಾದ ಭಾರಿ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ ಹುಕ್ಕೇರಿ ಪೋಲೀಸರು.
ಪೆಬ್ರವರಿ ನಾಲ್ಕರಂದು ಮುಂಬೈಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಚಿನ್ನದ ಆಭರಣ ವ್ಯಾಪಾರಸ್ಥ ಸಂಕೇಶ್ವರ ಹತ್ತಿರ ಬಸ್ಸ್ ನಿಂತಾಗ ಉಪಹಾರಕ್ಕೆ ತೇರಳಿದಾಗ
ಬಸ್ಸಿನಲ್ಲಿ ಇಟ್ಟ ಚಿನ್ನಾಭರಣ ವಿದ್ದಬ್ಯಾಗ ಕಳ್ಳತನವಾಗಿತ್ತು ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ ಪಿ ಡಾ, ಸಂಜಿವ ಪಾಟೀಲ ಪ್ರಕರಣವನ್ನು ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ರಫೀಕ ತಹಸಿಲ್ದಾರ ನೇತೃತ್ವದಲ್ಲಿ ತಂಡ ರಚಿಸಿ ಮಧ್ಯಪ್ರದೇಶದ ಧಾರ ಜಿಲ್ಲೆಯ ವಿನೋದ ಚವ್ಹಾನ ಎಂಬುವನನ್ನು ಬಂಧಿಸಿ ಆತನಿಂದ ಸುಮಾರು 51 ಲಕ್ಷ ರೂಪಾಯಿ ಬೆಲೆಬಾಳುವ ಬಂಗಾರದ ಆಭರಣ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಈ ಕುರಿತು ಮಾದ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಸಂಜೀವ ಪಾಟೀಲ ಈ ಪ್ರಕರಣವನ್ನು ಭೇಧೀಸಿದ ಪೋಲಿಸ್ ಅಧಿಕಾರುಗಳಿಗೆ ನಗದು ಬಹುಮಾನ ಘೋಷಿಸಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ ಪಿ ವೇಣುಗೋಪಾಲ, ಗೋಕಾಕ ಡಿ ಎಸ್ಪಿ ದೂದಪೀರ ಮುಲ್ಲಾ, ಪಿ ಎಸ್ ಆಯ್ ಗಳಾದ ಎಸ್ ಎಚ್ ಪವಾರ,ನರಸಿಂಹರಾಜು ಜೆ ಡಿ, ಸಿಬ್ಬಂದಿಗಳಾದ ಎ ಎಸ್ ಸನದಿ, ಜಿ ಎಸ್ ಕಾಂಬಳೆ, ಎಸ್ ಆರ್ ರಾಮದುರ್ಗ, ಮಂಜುನಾಥ ಕಬ್ಬೂರಿ, ಬಿ ವಿ ಹುಲಕುಂದ, ಎಂ ಎಂ ಕರಗುಪ್ಪಿ ಮೊದಲಾದವರು ಉಪಸ್ಥಿತರಿದ್ದರು