Breaking News
Home / ರಾಜಕೀಯ / ಗ್ರಾಮೀಣ ಇಂಧನ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಗ್ರಾಮೀಣ ಇಂಧನ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Spread the love

ಡಿಪ್ಲೊಮಾ ಇಂಜಿನಿಯರಿಂಗ್​ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಸರ್ಕಾರದ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ಗ್ರಾಮೀಣ ಇಂಧನ ಸಹಾಯಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು.

ಬೆಂಗಳೂರಿನಲ್ಲಿ ಹುದ್ದೆ ಕಾರ್ಯ ನಿರ್ವಹಣೆ ನಡೆಯಲಿದೆ. ಅಭ್ಯರ್ಥಿಗಳು ಕನ್ನಡ ಮತ್ತು ಆಂಗ್ಲ ಭಾಷಣೆಯ ತರಗತಿಗಳನ್ನು ತೆಗೆದುಕೊಳ್ಳುವ ಜ್ಞಾನ ಹೊಂದಿರಬೇಕು. ಕೆಲವೊಮ್ಮೆ ಭಾರತ ಮತ್ತು ಕರ್ನಾಟಕದಾದ್ಯಂತ ಪ್ರಯಾಣಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 20 ಸಾವಿರ ರೂ ವೇತನ ನಿಗದಿ ಮಾಡಲಾಗಿದೆ. ಒಂದು ವರ್ಷದ ಗುತ್ತಿಗೆ ಅವಧಿಗೆ ನೇಮಕಾತಿ ನಡೆಯಲಿದೆ.

 ಅಧಿಸೂಚನೆಆನ್​ಲೈನ್​ ಮತ್ತು ಆಫ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ನಿಗದಿತ ಅರ್ಜಿ ನಮೂನೆ ಲಭ್ಯವಿದೆ. ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್​ ಅಥವಾ ಸ್ಪೀಡ್​ ಪೋಸ್ಟ್​/ ಕೊರಿಯರ್​ ಮೂಲಕ ಜುಲೈ 3ಕ್ಕೆ ಮುನ್ನ ಸಲ್ಲಿಸಬೇಕಿದೆ. ಇ-ಮೇಲ್​ ವಿಳಾಸ: [email protected]

ಅಂಚೆ ಅರ್ಜಿ ಸಲ್ಲಿಕೆಗೆ ಪೋಸ್ಟಲ್‌ ವಿಳಾಸ: ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ, ಶ್ರೀರಾಂಪುರ ಕ್ರಾಸ್​, ಜಕ್ಕೂರು, ಬೆಂಗಳೂರು-560064.

ಅರ್ಜಿ ಸಲ್ಲಿಕೆ ಜೂನ್​​ 26ರಿಂದ ಆರಂಭವಾಗಿದೆ. ಜುಲೈ 3 ಕಡೆಯ ದಿನಾಂಕ. ಲಿಖಿತ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಅಧಿಕೃತ ಜಾಲತಾಣ mgired.kar.nic.inಗೆ ಭೇಟಿ ನೀಡಿ.

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ತೆಯ ಕುರಿತು..: ಬೆಂಗಳೂರಿನ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯು ಭಾರತ ಸರಕಾರದ ನವ್ಯ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯದ ನೆರವಿನೊಂದಿಗೆಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ 2000ನೇ ಇಸುವಿಯಲ್ಲಿ ಸ್ಥಾಪಿತವಾದ ಸಂಸ್ಥೆ ಇದಾಗಿದೆ.


Spread the love

About Laxminews 24x7

Check Also

ರಕ್ಷಾ ಬಂಧನ ದಿನಾಂಕ, ಶುಭ ಸಮಯ, ಮಹತ್ವವನ್ನು ತಿಳಿಯಿರಿ

Spread the love ರಕ್ಷಾ ಬಂಧನ ಸಹೋದರ ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾಗಿದೆ. ರಕ್ಷಾ ಬಂಧನ ಹಬ್ಬವನ್ನು ಪ್ರತಿ ವರ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ