ಹುಬ್ಬಳ್ಳಿ: ರಾಜ್ಯದ ಜನಕ್ಕೆ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದು ನಮ್ಮ ಪ್ರಣಾಳಿಕೆಯಲ್ಲಿ. ಹಾಗಾಗಿ ನಾವು ಬಿಜೆಪಿಯವರನ್ನು ಕೇಳಿ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅವಶ್ಯಕತೆ ಇರಲಿಲ್ಲ. ಮುಂಬರುವ ದಿನಗಳಲ್ಲಿ ಪ್ರಾಮಾಣಿಕವಾಗಿ ಜನರಿಗೆ 10ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಈ ವಿಷಯ ತಿಳಿಸಿದರು.
ಫುಡ್ ಕಾರ್ಪೋರೇಶನ್ ಅವರು 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ಬರೆದುಕೊಟ್ಟಿದ್ದರು. ಈಗ ಹಿಂಪಡೆದಿದ್ದಾರೆ. ಹಾಗಾಗಿ ನಾವು ಎಕ್ಸ್ಪೋಸ್ ಮಾಡಿದ್ದೇವೆ. ಐದು ಕೆಜಿ ಅಕ್ಕಿ ಕೊಡುವ ಪದ್ಧತಿ ಜಾರಿಗೆ ತಂದಿದ್ದು ಕೇಂದ್ರದ ಯುಪಿಎ ಸರ್ಕಾರ. ಆಹಾರ ಭದ್ರತಾ ಕಾಯ್ದೆ ತಂದಿದ್ದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ. ಈಗ ಕೊಡುತ್ತಿರುವ 10 ಕೆಜಿ ಅಕ್ಕಿಯ ಹಕ್ಕು ಇರೋದು ಕಾಂಗ್ರೆಸ್ಗೆ, ಬಿಜೆಪಿಗಲ್ಲ ಎಂದು ವಾಗ್ದಾಳಿ ನಡೆಸಿದರು.
Laxmi News 24×7