Breaking News

ಮಧ್ಯಪ್ರದೇಶದಲ್ಲೂ ಪೇಸಿಎಂ ಪೋಸ್ಟರ್ ವಾರ್

Spread the love

ಭೋಪಾಲ್ (ಮಧ್ಯ ಪ್ರದೇಶ) : ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಈ ಮಧ್ಯೆ ರಾಜಕೀಯ ಪಕ್ಷಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದ್ದು, ಇದೀಗ ಪೋಸ್ಟರ್ ವಾರ್​ನಿಂದಾಗಿ ರಾಜ್ಯದ ರಾಜಕೀಯ ಮತ್ತಷ್ಟು ರಂಗೇರುತ್ತಿದೆ. ಮಾಜಿ ಸಿಎಂ ಕಮಲ್ ನಾಥ್ ಮತ್ತು ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರಗಳಿರುವ ಆಕ್ಷೇಪಾರ್ಹ ಪೋಸ್ಟರ್‌ಗಳು ಅಲ್ಲಲ್ಲಿ ಕಾಣಿಸಿಕೊಂಡ ಮೂರು ದಿನಗಳ ನಂತರ, ಈಗ ಮತ್ತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರ ಹಾಗೂ ಕ್ಯೂಆರ್ ಕೋಡ್ ಇರುವ ಪೋಸ್ಟರ್​ಗಳು ಕೆಲವೆಡೆ ಕಂಡು ಬಂದಿವೆ. ಸಿಎಂ ಚಿತ್ರದೊಂದಿಗೆ ಕ್ಯೂಆರ್ ಕೋಡ್ ಇರುವ ಹಾಗೂ ಕೆಲಸ ಮಾಡಿಸಿಕೊಳ್ಳಬೇಕಾದರೆ 50 ಪರ್ಸೆಂಟ್ ಕಮಿಷನ್ ತನ್ನಿ ಎಂದು ಬರೆದಿರುವ ಪೋಸ್ಟರ್​ಗಳು ಭೋಪಾಲ್ ಮತ್ತು ಸಿಂಗ್ರೌಲಿಯಲ್ಲಿ ಕಾಣಿಸಿವೆ.

ಭೋಪಾಲ್‌ನ ಪ್ಲಾಟಿನಂ ಪ್ಲಾಜಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇವುಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರವನ್ನು ಫೋನ್​ಪೆ ಸ್ಕ್ಯಾನರ್‌ನ ಮಧ್ಯದಲ್ಲಿ ಅಂಟಿಸಲಾಗಿದೆ. 50 ಪರ್ಸೆಂಟ್ ತನ್ನಿ, ಕೆಲಸ ಮಾಡಿಸಿಕೊಳ್ಳಿ ಎಂದು ಅದರ ಮೇಲೆ ಬರೆಯಲಾಗಿದೆ. ಈ ಪೋಸ್ಟರ್ ಅನ್ನು ಯಾರು ಹಾಕಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.

 

 


Spread the love

About Laxminews 24x7

Check Also

ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ 2:1ರ ಅನುಪಾತ: ಗೆಜೆಟ್ ಅಧಿಸೂಚನೆ ಪ್ರಕಟ

Spread the loveಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಗೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿ ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಪ್ರಾಥಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ