ಖಾನಾಪೂರ ತಾಲೂಕಿನ ನಂದಗಡದ ಮುಖ್ಯ ರಸ್ತೆಯ ಮಧ್ಯದಲ್ಲಿ ಇರುವ ಶ್ರೀ ರಾಮ ಮಂದಿರದಲ್ಲಿ ಶ್ರಮದಾನ ಮಾಡುವ ಮುಖಾಂತರ ಮಂದಿರದ ದುರಸ್ಥಿ ಕಾರ್ಯ ನಿರ್ವಹಿಸಿ ಮಂದಿರದ ಅಕ್ಕ ಪಕ್ಕದ ಪರಿಸರ, ಅದರಂತೆಯೇ ಮೇಲ್ಚಾವಣಿಗೆ ಪತ್ರೆ ಹಾಕಿ ದುರಸ್ಥಿ ಕೆಲಸಕ್ಕೆ ಮೊದಲಿಗೆ ಪೂಜೆ ಸಲ್ಲಿಸಿದ ನಂತರ ಚಾಲನೆ ನೀಡಲಾಯಿತು.
ಈ ಕುರಿತು ಮೊದಲಿಗೆ ಸಾರ್ವಜನಿಕವಾಗಿ ಚರ್ಚೆ ನಡೆಸಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡು ಇದಕ್ಕಾಗಿ ತಗಲುವ ಸಾಮಾಗ್ರಿಗಳ ಬಗ್ಗೆ ವ್ಯವಸ್ಥೆ ಮಾಡಿಕೊಂಡು ಶ್ರೀರಾಮ ಮಂದಿರದಲ್ಲಿ ಶ್ರಮದಾನ ಮಾಡುವ ಮುಖಾಂತರ ಮಂದಿರದ ದುರಸ್ಥಿ ಕಾರ್ಯದಲ್ಲಿ ಸಕ್ರೀಯವಾಗಿ ಭಕ್ತರು ತೊಡಗಿಕೊಂಡಿರುವ ದೃಶ್ಯ ಕಂಡುಬಂತು.
ಈ ಕಾರ್ಯ ಇನ್ನೂ ಎರಡು ದಿನಗಳವರೆಗೆ ನಡೆಯಲಿದ್ದು ಶ್ರೀ ರಾಮ ಭಕ್ತರು ಸಕ್ರೀಯವಾಗಿ ಸೇವೆ ಸಲ್ಲಿಸಲಿದ್ದಾರೆ.