Breaking News

ನಿಯಮ ಪಾಲಿಸದೆ ಮನೆಯ ವಿದ್ಯುತ್​ ಸಂಪರ್ಕ ಕಡಿತ : ಬೆಸ್ಕಾಂಗೆ 25 ಸಾವಿರ ರೂ. ದಂಡ

Spread the love

ದಾವಣಗೆರೆ: ನಿಯಮ ಪಾಲಿಸದೇ ಮನೆಯ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ ಪ್ರಕರಣ ಸಂಬಂಧ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಬೆಸ್ಕಾಂಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್​ನ ಮನೆಯೊಂದರಲ್ಲಿ ಅಧಿಕಾರಿಗಳು ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ ಕುರಿತಂತೆ ಗ್ರಾಹಕರೊಬ್ಬರು ಗ್ರಾಹಕರ ಪರಿಹಾರ ವೇದಿಕೆಯ ಮೊರೆ ಹೋಗಿದ್ದರು.

ಪವನ್ ರೇವಣಕರ್​ ಎಂಬುವರಿಗೆ 2022ರ ಆಗಸ್ಟ್ ತಿಂಗಳಲ್ಲಿ 1,454 ರೂಪಾಯಿ ವಿದ್ಯುತ್​ ಬಿಲ್ ಬಂದಿತ್ತು. ಆದರೆ ಕಾರಣಾಂತರಗಳಿಂದ ಪವನ್ ವಿದ್ಯುತ್ ಬಿಲ್ ಪಾವತಿ ಮಾಡಿರಲಿಲ್ಲ. ವಿದ್ಯುತ್ ಬಿಲ್ ಪಾವತಿಸದ ಕಾರಣ ಬೆಸ್ಕಾಂ ಸಿಬ್ಬಂದಿಯು ಪವನ್​ ಮನೆಗೆ ವಿದ್ಯುತ್​ ಸಂಪರ್ಕ ಕಟ್​ ಮಾಡಿದ್ದರು. ಬಿಲ್ ಕಟ್ಟದೆ ಇದ್ದಾಗ ಅಂತಿಮ ದಿನ ನಿಗದಿಗೊಳಿಸಿ ಪಾವತಿ ಮಾಡಲು ಕಾಲವಕಾಶ ನೀಡದೆ ಅಧಿಕಾರಿಗಳು ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿ ಪವನ್​ ಗ್ರಾಹಕರ ಪರಿಹಾರ ವೇದಿಕೆಗೆ ದೂರು ನೀಡಿದ್ದರು.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್​​ಸಿ) ಕೋಡ್ 2004ರ ಸೆಕ್ಷನ್ 9 ನಿಯಮದ ಅಡಿ ಆದೇಶವನ್ನು ಅಧಿಕಾರಿಗಳು ಉಲ್ಲಂಘನೆ ಮಾಡಿದ್ದಾರೆ ಎಂದು ಗ್ರಾಹಕ ಪವನ್ ದಾವೆ ಹೂಡಿದ್ದರು.‌ ವಿಶೇಷವೆಂದರೆ, ಪವನ್ ತಮ್ಮ ದಾವೆಗೆ ವಾದ ಮಾಡಲು ಯಾವುದೇ ವಕೀಲರನ್ನು ನೇಮಕ ಮಾಡಿಕೊಳ್ಳದೆ, ತಾವೇ ವಕಾಲತ್ತು ಮಾಡಿ ಬೆಸ್ಕಾಂಗೆ ದಂಡ ವಿಧಿಸುವಂತೆ ಮಾಡಿದ್ದಾರೆ. ಪ್ರಕರಣ ಸಂಬಂಧ ತಮಗಾದ ಆನಾನುಕೂಲತೆ ಹಾಗೂ ಮಾನಸಿಕ ಹಿಂಸೆಗಾಗಿ 5 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ವೇದಿಕೆಯ ಮೂಲಕ ಆಗ್ರಹಿಸಿದ್ದರು. ಅಧಿಕಾರಿಗಳಿಂದ ನಿಯಮ ಉಲ್ಲಂಘನೆ ಸಾಬೀತಾದ ಹಿನ್ನೆಲೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಬೆಸ್ಕಾಂ 20 ಸಾವಿರ ರೂಪಾಯಿ ದಂಡ ಪಾವತಿಸಬೇಕು ಹಾಗೂ ದೂರುದಾರನಿಗೆ 5,000 ರೂ. ಪರಿಹಾರ ನೀಡುವಂತೆ ಮಹತ್ವದ ಆದೇಶ ನೀಡಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ