Breaking News

ಮಳೆ ಇಲ್ಲದೇ ಕಂಗಾಲಾಗಿದ್ದಾನೆ.ರೈತ

Spread the love

ಧಾರವಾಡ: ಮೊದಲೇ ಮಳೆ ಇಲ್ಲದೇ ರೈತ ಕಂಗಾಲಾಗಿದ್ದಾನೆ. ಹೀಗಿರುವಾಗ ರೈತ ಅಷ್ಟೋ ಇಷ್ಟೋ ಬೆಳೆದ ಬೆಳೆ ದನಗಳ ಪಾಲಾಗುತ್ತಿದೆ. ಇದರಿಂದ ಮತ್ತಷ್ಟು ಕಂಗಾಲಾಗಿರುವ ರೈತ ತಾವು ಬೆಳೆದ ಬೆಳೆಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾನೆ.

ದೃಶ್ಯಗಳಲ್ಲಿ ಕಾಣುತ್ತಿರುವ ಈ ರೈತರು ಧಾರವಾಡ ತಾಲೂಕಿನ ಯರಿಕೊಪ್ಪ ಹಾಗೂ ಮನಸೂರು ಗ್ರಾಮದವರು. ನೀರಾವರಿ ಮಾಡಿಕೊಂಡು ಅಷ್ಟೋ ಇಷ್ಟೋ ಬೆಳೆಯನ್ನು ರೈತರು ಬೆಳೆದಿದ್ದಾರೆ. ಆದರೆ, ತಡಸಿನಕೊಪ್ಪ ಹಾಗೂ ಜೋಗೆಲ್ಲಾಪುರದ ದನಗಳು ಹೊಲಗಳಿಗೆ ನುಗ್ಗಿ

ಬೆಳೆ ತಿಂದು ಹಾಕುತ್ತಿವೆ. ಹಗಲು ರಾತ್ರಿ ನಾವು ದನಗಳನ್ನು ಕಾಯುವುದೇ ಕಾಯಕವಾಗಿದೆ. ಹೀಗಾಗಿ ಜಿಲ್ಲಾಡಳಿತ ತಡಸಿನಕೊಪ್ಪ ಹಾಗೂ ಜೋಗೆಲ್ಲಾಪುರ ಗ್ರಾಮದ ಪಂಚಾಯ್ತಿಗೆ ಸೂಕ್ತ ನಿರ್ದೇಶನ ನೀಡಿ ಯರಿಕೊಪ್ಪ ಹಾಗೂ ಮನಸೂರು ಗ್ರಾಮಗಳ ಸುತ್ತ ದನಗಳನ್ನು ಬಿಡದಂತೆ ಡಂಗುರ ಸಾರಿಸಬೇಕು ಎಂದು ಆಗ್ರಹಿಸಿದರು.

ಈ ರೀತಿ ರೈತರ ಹೊಲಗಳಿಗೆ ದನಗಳನ್ನು ಬಿಟ್ಟು ಬೆಳೆ ನಾಶಪಡಿಸುತ್ತಿರುವವರ ಮೇಲೆ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ರೈತರು ಇದೇ ಸಂದರ್ಭದಲ್ಲಿ ಅಗ್ರಹಸಿದ್ದರು


Spread the love

About Laxminews 24x7

Check Also

5 ತಾಲೂಕುಗಳ ಶಾಲೆಗೆ ಇಂದು ರಜೆ ಘೋಷಣೆ

Spread the loveಮಂಗಳೂರು/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್​ 29(ಶುಕ್ರವಾರ) ರಂದು ಜಿಲ್ಲೆಯ ಶಾಲೆ, ಪ್ರೌಢಶಾಲೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ