ಬೆಳಗಾವಿ: ಸಾರಾಯಿ ಸೇವಿಸಬೇಡ ಎಂದು ಪತ್ನಿ ಬುದ್ದಿವಾದ ಹೇಳಿದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಶಹಾಪೂರದಲ್ಲಿ ಇಂದು ನಡೆದಿದೆ. ರಾಹುಲ್ ಸಹದೇವ ಸೈನೊಚೆ(30) ಮೃತ ವ್ಯಕ್ತಿ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಮದ್ಯ ವ್ಯಸನಿಗೆ ಅಂಟುಕೊಂಡಿದ್ದ. ದಸರಾ ಹಬ್ಬ ಹಿನ್ನೆಲೆ ದಿನಸಿಗಾಗಿ ಪತ್ನಿ ಹಣ ಬೇಡಿದ್ದು, ಸಾರಾಯಿ ಸೇವಿಸದಂತೆ ಪತ್ನಿ ಮನವಿ ಮಾಡಿದ್ದಾಳೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದು ಆತ ಎರಡು ದಿನದಿಂದ ಮನೆ ಬಿಟ್ಟು ಹೋಗಿದ್ದ. ನಿನ್ನೆ ವಾಪಸ್ ಬಂದಿದ್ದು, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಬಂಧ ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.