ಮಾನವನ ವಯಸ್ಸು 40 ದಾಟಿದ ನಂತರ ಮೂಳೆಗಳು ಸಹಜವಾಗಿಯೇ ದುರ್ಬಲವಾಗುತ್ತವೆ. ಅದರಲ್ಲೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ಮೂಳೆಗಳ ದೌರ್ಬಲ್ಯದಿಂದಾಗಿ, ನಮ್ಮ ದೈನಂದಿನ ಜೀವನದ ಅಗತ್ಯ ಕೆಲಸಗಳನ್ನು ಮಾಡಲು ಕೆಲವೊಮ್ಮೆ ಕಷ್ಟವಾಗುತ್ತದೆ. ಆದ್ದರಿಂದ ಮೂಳೆಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿದೆ.
ಅನೇಕ ಬಾರಿ ನಮ್ಮ ಕೆಲವೊಂದು ಕೆಟ್ಟ ಅಭ್ಯಾಸಗಳೇ ದುರ್ಬಲ ಮೂಳೆಗಳ ಸಮಸ್ಯೆಗೆ ಕಾರಣವಾಗುತ್ತವೆ. ಇದರಿಂದ ಸಕ್ಕರೆ ಕಾಯಿಲೆ ಕೂಡ ಬರಬಹುದು.
40 ವರ್ಷ ವಯಸ್ಸಿನ ನಂತರವೂ ಮೂಳೆಗಳು ಗಟ್ಟಿಯಾಗಿರಬೇಕೆಂದು ನೀವು ಬಯಸಿದರೆ ಮೊದಲು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸೇರಿದಂತೆ ಅನೇಕ ಪೋಷಕಾಂಶ ಆಧಾರಿತ ಆಹಾರ ಪದಾರ್ಥಗಳನ್ನು ಸೇವಿಸಬೇಕು.