Breaking News

ಎಕ್ಸ್​ಪ್ರೆಸ್​ವೇಯಲ್ಲಿ ಭೀಕರ ರಸ್ತೆ ಅಪಘಾತ.. ಹೊತ್ತಿ ಉರಿಯುತ್ತಿರುವ ಆಯಿಲ್​ ಟ್ಯಾಂಕರ್, ಸಾವು-ನೋವು! ​

Spread the love

ಪುಣೆ (ಮಹಾರಾಷ್ಟ್ರ): ಲೋನಾವಾಲಾ ಬಳಿಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಮೇಲ್ಸೇತುವೆಯಲ್ಲಿ ತೈಲ ಟ್ಯಾಂಕರ್ ಅಪಘಾತಕ್ಕೀಡಾಗಿ (Oil Tanker Fire) ಬೆಂಕಿ ಹೊತ್ತಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಇದರಿಂದಾಗಿ ಸೇತುವೆಯ ಕೆಳಗಿನ ಭಾಗದಲ್ಲೂ ಅಪಘಾತಗಳು ಸಂಭವಿಸಿವೆ ಎಂಬ ಮಾಹಿತಿ ಹೊರಬೀಳುತ್ತಿದೆ. ಈ ಅಪಘಾತದಲ್ಲಿ 12 ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಈ ಅಗ್ನಿ ಅವಘಡದಿಂದಾಗಿ ರಕ್ಷಣಾ ಕಾರ್ಯಾಚರಣೆಯು ಯುದ್ಧೋಪಾದಿಯಲ್ಲಿ ನಡೆಯುತ್ತಿದ್ದು, ಸದ್ಯ ಲೋನಾವಾಲಾ ನಗರದಿಂದ ವಾಹನ ಸಂಚಾರವನ್ನು ಬದಲಿಸಲಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಬಹುದು. ಆದ್ದರಿಂದ ರಕ್ಷಣಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ.

ಸೇತುವೆ ಕೆಳಗೆ ಮತ್ತೊಂದು ಅಪಘಾತ: ಮಂಗಳವಾರ ಮೇಲ್ಸೇತುವೆ ಆಯಿಲ್​ ಟ್ಯಾಂಕರ್​ವೊಂದು ರಸ್ತೆಯ ಮೇಲೆ ಉರುಳಿ ಬಿದ್ದಿದೆ. ಈ ವೇಳೆ ಆಯಿಲ್​ ಟ್ಯಾಂಕರ್​ಗೆ ಬೆಂಕಿ ಹೊತ್ತಿಕೊಂಡಿದೆ. ವಾಹನದಲ್ಲಿ ಆಯಿಲ್​ ಇದ್ದ ಕಾರಣ ಬೆಂಕಿ ಜ್ವಾಲೆ ರಸ್ತೆ ತುಂಬೆಲ್ಲ ಹರಿಡಿತ್ತು. ಅಷ್ಟೇ ಅಲ್ಲ, ವಾಹನದಲ್ಲಿದ್ದ ಆಯಿಲ್​ ಸೇತುವೆ ಮೇಲಿಂದ ಕೆಳ ರಸ್ತೆಯುದ್ದಕ್ಕೂ ಹರಡಿದೆ. ಹೀಗಾಗಿ ಕೆಳ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಮಧ್ಯೆ ಅಪಘಾತ ಸಂಭವಿಸಿರಬಹುದೆಂಬ ಅನುಮಾನ ಮೂಡಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ಬಳಿಕವೇ ಅಪಘಾತದ ನಿಖರ ಕಾರಣ ತಿಳಿದು ಬರಲಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ