Breaking News

ಹುಬ್ಬಳ್ಳಿ ಧಾರವಾಡ ನಡುವೆ ತಲೆಎತ್ತಲಿದೆ ಹೊಸ ಟೌನ್ ಶಿಪ್;

Spread the love

ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಸುಸಜ್ಜಿತ ರಸ್ತೆ, ಯುಜಿಡಿ, ನೀರು, ಪಾರ್ಕಿಂಗ್‌ ಹಾಗೂ ಉದ್ಯಾನ ಸೇರಿದಂತೆ ಅಗತ್ಯ ಮೂಲಸೌಲಭ್ಯವುಳ್ಳ ಮಾದರಿಯ ಟೌನ್‌ಶಿಪ್‌ ನಿರ್ಮಿಸಲು ಯೋಜಿಸಲಾಗಿದ್ದು,

ಈ ಬಗ್ಗೆ ಈಗಾಗಲೇ ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದು ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು.

ನಗರದ ‘ವಿಜಯ ಕರ್ನಾಟಕ’ ಕಚೇರಿಯಲ್ಲಿ ಸೋಮವಾರ ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿಗಳೊಂದಿಗೆ ನಡೆದ ‘ಶಾಸಕರೊಂದಿಗೆ ವಿಕ ಸಂವಾದ ಕಾರ್ಯಕ್ರಮದಲ್ಲಿ’ ಅವರು ಮಾತನಾಡಿದರು.

ಹು-ಧಾ ಬಿಆರ್‌ಟಿಎಸ್‌ ರಸ್ತೆಯ ಅಕ್ಕಪಕ್ಕದಲ್ಲಿ ಒಂದು ಸಾವಿರ ಎಕರೆ ಜಮೀನು (ಇದಕ್ಕಿಂತ ಹೆಚ್ಚಿದ್ದರೂ, ಕಡಿಮೆ ಇದ್ದರೂ ಅದರಲ್ಲಿಯೋಜನೆ ಕಾರ್ಯಗತ) ಗುರುತಿಸುವ ಮೂಲಕ ಮಾದರಿ ಟೌನ್‌ಶಿಪ್‌ ನಿರ್ಮಿಸಲಾಗುವುದು. ಇದು ನನ್ನ ಕನಸಿನ ಯೋಜನೆ ಆಗಿದೆ ಎಂದರು.


Spread the love

About Laxminews 24x7

Check Also

ಕರ್ನಾಟಕ ರಾಜ್ಯಪಾಲರ ಸಹಿ ದುರ್ಬಳಕೆ, ಸುಳ್ಳು ನೇಮಕಾತಿ ಆದೇಶ!

Spread the loveಬೆಂಗಳೂರು: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರ ಸಹಿ ನಕಲು ಮಾಡಿ ಖೊಟ್ಟಿ ಲೆಟರ್‌ಹೆಡ್‌ ಬಳಸುತ್ತಿದ್ದ ನಕಲಿ ಐಪಿಎಸ್‌, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ