Breaking News

ಟೈಗರ್​ 3 ಶೂಟಿಂಗ್​: ಭರ್ಜರಿ ಆಯಕ್ಷನ್​ ಸೀನ್​ ಪೂರ್ಣ, ಸಲ್ಲು – ಶಾರುಖ್​​ ವಿಡಿಯೋ ಲೀಕ್​!

Spread the love

ಶೂಟಿಂಗ್​ ಸೆಟ್​ ಒಂದರಿಂದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ವಿಡಿಯೋ ಲೀಕ್ ಆಗಿದ್ದು, ‘ಟೈಗರ್ 3’ ಸಿನಿಮಾದ್ದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.

ಬಾಲಿವುಡ್ ಸೂಪರ್‌ ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ‘ಪಠಾಣ್‌’ ಚಿತ್ರದಲ್ಲಿ ತೆರೆ ಹಂಚಿಕೊಂಡು ಮೋಡಿ ಮಾಡಿದ್ದರು.

ವಿವಾದಗಳ ನಡುವೆಯೇ ತೆರೆಕಂಡ ಈ ಚಿತ್ರ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಮಾಡಿದವು. ಅವರು ಮತ್ತೆ ಒಟ್ಟಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಟೈಗರ್ 3’. ಈ ಸ್ಟಾರ್​ ನಟರ ಅದ್ಭುತ ದೃಶ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಮಧ್ಯೆ, ಇಬ್ಬರು ನಟರು ಚಿತ್ರದ ಸೆಟ್‌ಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

 

 

ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಬಾಲಿವುಡ್​ ಸೂಪರ್​ ಸ್ಟಾರ್​ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ತಮ್ಮ ಚಿತ್ರೀಕರಣ ಮುಗಿಸಿದ ವಾರಗಳ ನಂತರ ‘ಟೈಗರ್ 3’ ಸೆಟ್‌ನ ಹೊಸ ವಿಡಿಯೋ ವೈರಲ್ ಆಗಿದೆ. ಕಳೆದ ತಿಂಗಳು, ಸಲ್ಮಾನ್ ಮತ್ತು ಎಸ್‌ಆರ್‌ಕೆ ತಮ್ಮ ಮುಂದಿನ ಸ್ಪೈ ಚಿತ್ರಕ್ಕಾಗಿ ಅದ್ಭುತ ಆಯಕ್ಷನ್ ಸೀಕ್ವೆನ್ಸ್‌ನಲ್ಲಿ ಸಹಕರಿಸಿ ಸಖತ್​ ಸುದ್ದಿ ಮಾಡಿದ್ದರು.

ವೀಕ್ಷಕರು ಹಿಂದೆಂದೂ ನೋಡದಂತಹ ಅನುಭವವನ್ನು ನೀಡಲು ಬರೋಬ್ಬರಿ 35 ಕೋಟಿ ರೂಪಾಯಿ ಮೌಲ್ಯದ ಸೆಟ್ ಅನ್ನು ಇದಕ್ಕೆ ನಿರ್ಮಿಸಲಾಗಿತ್ತು. ಶೂಟಿಂಗ್​ ಸೆಟ್​ಗೆ ಇಷ್ಟೊಂದು ಖರ್ಚಾಗಿದೆ ಎಂದರೆ ಸಿನಿಮಾ ಹೇಗಿರಬಹುದು ಎಂಬ ಕಲ್ಪನಾ ಲೋಕದಲ್ಲಿ ಅಭಿಮಾನಿಗಳಿದ್ದಾರೆ.

ಅಭಿಮಾನಿಗಳ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ, ಟೈಗರ್​​ 3 ಸೆಟ್‌ ಮಾತ್ರವಲ್ಲದೇ ಈ ಇಬ್ಬರು ಸ್ಟಾರ್ ಸೆಲೆಬ್ರಿಟಿಗಳ ನೋಟವನ್ನು ತೋರಿಸಿದೆ. ಸಲ್ಮಾನ್ ಖಾನ್​​ ಕಾರ್ಗೋ ಪ್ಯಾಂಟ್ ಮತ್ತು ಬ್ರೌನ್ ಟೀ ಶರ್ಟ್​ ಧರಿಸಿ ತನ್ನ ಫಿಟ್​ ಅಂಡ್​ ಫೈನ್​​ ಮೈಕಟ್ಟು ಪ್ರದರ್ಶಿಸಿದರೆ, ಶಾರುಖ್ ಖಾನ್​ ಬ್ಲ್ಯಾಕ್​ ಟೀ ಶರ್ಟ್ ಮತ್ತು ಕಾರ್ಗೋ ಪ್ಯಾಂಟ್‌ನಲ್ಲಿ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರು ನಟರು ಸೆಟ್‌ಗೆ ಬರುತ್ತಿರುವುದನ್ನು ಕಾಣಬಹುದು. ಶಾರುಖ್ ಅವರು ‘ಪಠಾಣ್​’ ಚಿತ್ರದಲ್ಲಿ ಕಾಣಿಸಿಕೊಂಡಂತೆ ಮ್ಯಾನ್ ಬನ್ ಹೇರ್ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಪಠಾಣ್​ ಮತ್ತು ಟೈಗರ್​ 3 ಸ್ಟೋರಿಯಲ್ಲಿ ಲಿಂಕ್​ ಇರಲಿದೆ ಎಂಬ ವಿಚಾರ ಸದ್ದು ಮಾಡುತ್ತಿದೆ.


Spread the love

About Laxminews 24x7

Check Also

ನಮಗೆ ಇ.ಡಿ ಸಮನ್ಸ್ ಮೂಲಕ ಕಿರುಕುಳ ನೀಡಲಾಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

Spread the loveಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ