Breaking News

ಡಿಕೆಶಿಯವ್ರಿಗೆ ನಾನು ಸರಿಸಾಟಿ ಆಗಲು ಸಾಧ್ಯವಿಲ್ಲ. ಡಿಕೆಶಿ ಎಂಥ ದೊಡ್ಡವರು, ಅವರ ಮುಂದೆ ನಾನು ಸಣ್ಣವನು”:ಮುನಿರತ್ನ ತಿರುಗೇಟು

Spread the love

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸರಿಸಮನಾಗಲು ನನಗೆ ಸಾಧ್ಯವೇ ಇಲ್ಲ. ಇದೊಂದು ಜನ್ಮದಲ್ಲಿ ಮಾತ್ರ ಅಲ್ಲ, ಏಳೇಳು ಜನ್ಮದಲ್ಲೂ ಡಿಕೆಶಿಯವ್ರಿಗೆ ನಾನು ಸರಿಸಾಟಿ ಆಗಲು ಸಾಧ್ಯವಿಲ್ಲ ಎಂದು ಆರ್‍ಆರ್ ನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ತಿರುಗೇಟು ನೀಡಿದ್ದಾರೆ.

ಇಂದು ಜಾಲಹಳ್ಳಿ ವಾರ್ಡ್ ನಲ್ಲಿ ಸ್ಕೂಟರ್ ನಲ್ಲಿ ಓಡಾಡ್ಕೊಂಡೇ ಮನೆ ಮನೆ ಪ್ರಚಾರ ಮಾಡುತ್ತಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯುದ್ಧದಲ್ಲಿ ಎದುರಾಳಿ ಸರಿಸಮ ಇದ್ರೆ ಹೊರಾಡಬಹುದೆಂದು ಮುನಿರತ್ನ ಕುರಿತು ಡಿಕೆಶಿ ನಿನ್ನೆ ನೀಡಿದ್ದ ಹೇಳಿಕೆ ಪ್ರತಿಕ್ರಿಯಿಸಿದ ಮುನಿರತ್ನ, ಡಿಕೆಶಿ ಹೇಳಿದ ಮಾತು ಸತ್ಯ. ಡಿಕೆಶಿ ಅವರ ಸರಿಸಮನಾಗಲು ನನಗೆ ಸಾಧ್ಯವೇ ಇಲ್ಲ. ಇದೊಂದು ಜನ್ಮದಲ್ಲಿ ಮಾತ್ರ ಅಲ್ಲ, ಏಳೇಳು ಜನ್ಮದಲ್ಲೂ ಡಿಕೆಶಿಯವ್ರಿಗೆ ನಾನು ಸರಿಸಾಟಿ ಆಗಲು ಸಾಧ್ಯವಿಲ್ಲ. ಡಿಕೆಶಿ ಎಂಥ ದೊಡ್ಡವರು, ಅವರ ಮುಂದೆ ನಾನು ಸಣ್ಣವನು ಎಂದರು.

ಅವರು ಇವತ್ತು ಯಾವ ಮಟ್ಟದಲ್ಲಿದ್ದಾರೆ, ನಾನು ಆ ಮಟ್ಟಕ್ಕೆ ತಲುಪಲು ಆಗಲ್ಲ. ದೇವರು ನನಗೆ ಏಳು ಜನ್ಮ ಕೊಟ್ರೂ ಅವರ ಸಮನಾಗಿ ಬರಲು ಸಾಧ್ಯವಿಲ್ಲ. ಡಿಕೆಶಿಯವ್ರಿಗೂ ನನಗೂ ಹೋಲಿಕೆ ಮಾಡಿ ಮಾತಾಡೋದೇ ತಪ್ಪು ಎಂದು ಹೇಳುವ ಮೂಲಕ ಡಿಕೆಶಿ ಹೇಳಿಕೆಗೆ ಮುನಿರತ್ನ ವ್ಯಂಗ್ಯವಾಡಿದರು


Spread the love

About Laxminews 24x7

Check Also

ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ಬೇಡ, ಬುಡ್ಗ ಜಂಗಮರಲ್ಲ: ಹೈಕೋರ್ಟ್​ ಸ್ಪಷ್ಟನೆ

Spread the love ಬೆಂಗಳೂರು: ವೀರಶೈವ ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ‘ಬೇಡ’ ಅಥವಾ ‘ಬುಡ್ಗ’ ಜಂಗಮರಲ್ಲ. ಲಿಂಗಾಯಿತರಲ್ಲಿನ ಜಂಗಮರು ತಾವು ಬೇಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ