ಟಿಕೆಟ್‌ಗೆ ದುಡ್ಡುಕೊಡಲ್ಲ: ಕಂಡಕ್ಟರ್ ಜೊತೆಗೆ ಅಜ್ಜಿ ಗಲಾಟೆ ವಿಡಿಯೋ ವೈರಲ್
Laxminews 24x7
ಮೇ 24, 2023
ರಾಜಕೀಯ, ರಾಜ್ಯ
66 Views
ರಾಯಚೂರು: ಮಸ್ಕಿಯಿಂದ ಸಿಂಧನೂರುಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಡಕ್ಟರ್ ಗೆ ಅಜ್ಜಿಯೊಬ್ಬರು ಪ್ರಯಾಣದ ಹಣವನ್ನು ನೀಡಲು ನಿರಾಕರಿಸಿರುವ ಘಟನೆ ನಡೆದಿದೆ.
ಘಟನೆ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಅಜ್ಜಿ ಕಂಡಕ್ಟರ್ ಜೊತೆಗೆ ಕಿರಿಕ್ ಮಾಡಿದ್ದು, ಆದೇಶವನ್ನು ಮಾಡಿದ್ದು, ನಮ್ಮ ಶಾಸಕರು ಹೇಳಿದ್ದಾರೆ, ಹೀಗಾಗಿ ನಾನು ಯಾಕೆ ಟಿಕೆಟ್ ತಗೊಳ್ಳಬೇಕು ಅಂತ ವಾಗ್ದಾಳಿ ನಡೆಸಿದ್ದಾರೆ.
ಅಂದ ಹಾಗೇ ಕಾಂಗ್ರೆಸ್ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣ ಮಾಡುವ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಬಗ್ಗೆ ಆಶ್ವಾಸನೆಯನ್ನು ನೀಡಿತ್ತು, ಆದರಂತೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತಾತ್ವಿಕ ಒಪ್ಪಿಗೆಯನ್ನು ನೀಡಲಾಗಿದೆ. ಆದರೆ ಇನ್ನೂ ಕೂಡ ಇದು ಕಾರ್ಯದೇಶವನ್ನು ಹೊರಡಿಸಿಲ್ಲ.