Breaking News

ಸರ್ಕಾರಿ ಶಾಲೆ ಆವರಣದಲ್ಲಿ ಯುವಕನ‌ ಹತ್ಯೆ ಕೇಸ್; ಇಬ್ಬರು ಆರೋಪಿಗಳ ಬಂಧನ

Spread the love

ಬೆಳಗಾವಿ: ನಿನ್ನೆ(ಮೇ.18) ಬೆಳಗ್ಗೆ ಮಾರಿಹಾಳ ಸರ್ಕಾರಿ ಶಾಲೆ(Marihal Government School)ಯ ಕೊಠಡಿ ಎದುರು ಮಹಾಂತೇಶ ಕರಲಿಂಗಣ್ಣವರ್ (24) ಮೃತದೇಹ ಪತ್ತೆಯಾಗಿತ್ತು. ಯುವಕನನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಯಾರೂ ಹತ್ಯೆ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಮಾರಿಹಾಳ ಠಾಣೆ ಪೊಲೀಸರು, ಘಟನೆ ನಡೆದ 24 ಗಂಟೆಗಳೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಳೇಭಾವಿ ನಿವಾಸಿ ಅಕ್ಷಯಕುಮಾರ್ ಕೊಣಕೇರಿ(23), ಮಾರಿಹಾಳ ನಿವಾಸಿ ರಾಜೇಸಾಬ್ ಮುಲ್ಲಾ(23) ಬಂಧನಕ್ಕೊಳಗಾದ ಆರೋಪಿಗಳು.

ನಾಲ್ಕು ದಿನಗಳ ಹಿಂದೆ ಕೊಲೆಯಾದ ಮಹಾಂತೇಶ ಹಾಗೂ ಆರೋಪಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಈ ವೇಳೆ ಕೊಲೆಯಾದ ಮಹಾಂತೇಶ್ ರಾಜೇಸಾಬ್‌ಗೆ ಧಮ್ಕಿ ಹಾಕಿದ್ದನಂತೆ. ಇದೇ ವೈಷಮ್ಯವಿಟ್ಟುಕೊಂಡು ಇಬ್ಬರು ಆರೋಪಿಗಳು ಹತ್ಯೆ ಮಾಡಿ, ಪರಾರಿಯಾಗಿದ್ರು.ಇನ್ನು ಕೊಲೆಯಾದ ಮಹಾಂತೇಶ ಬೆಳಗ್ಗೆ 7 ಗಂಟೆಗೆ ಬೆಳಗಾವಿಗೆ ಕೆಲಸಕ್ಕೆ ಹೋಗಿ, ಸಂಜೆ 7 ಗಂಟೆ ಹೊತ್ತಿಗೆ ಮನೆಗೆ ವಾಪಸ್ ಆಗುತ್ತಿದ್ದ. ಆದ್ರೆ, ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮಹಾಂತೇಶನಿಗೆ ಅಣ್ಣ ಫೋನ್ ಮಾಡಿದ ವೇಳೆ ಬಸ್ ನಿಲ್ದಾಣ ಬಳಿ ಇದ್ದೀನಿ ಎಂದಿದ್ದ ಮಹಾಂತೇಶ, ಬಳಿಕ ಮನೆಗೆ ವಾಪಸ್ ಆಗಿರಲಿಲ್ಲ.

ಸ್ನೇಹಿತರ ಜೊತೆ ಎಲ್ಲಿಯಾದರೂ ಹೋಗಿರಬೇಕು ಎಂದು ಮನೆಯವರು ನಿದ್ದೆಗೆ ಜಾರಿದ್ದರು. ನಿನ್ನೆ(ಮೇ.19) ಬೆಳ್ಳಂಬೆಳಗ್ಗೆ ಮಾರಿಹಾಳ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿ ಎದುರು ಮಹಾಂತೇಶ ಕೊಲೆಯಾಗಿದ್ದಾನೆ ಎಂಬ ಸುದ್ದಿ ಗೊತ್ತಾಗಿದೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಡಿಸಿಪಿ ಸ್ನೇಹಾ ಹಾಗೂ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.


Spread the love

About Laxminews 24x7

Check Also

ಗವರ್ನರ್ V/S ಗವರ್ನಮೆಂಟ್‌: ಭಾಷಣದ ಕೆಲ ಸಾಲು ಬದಲಾವಣೆಗೆ ನಿರ್ಧಾರ; ಒಪ್ಪದಿದ್ದರೆ ಕಾನೂನು ಹೋರಾಟವೆಂದ ಸರ್ಕಾರ

Spread the loveಬೆಂಗಳೂರು: ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ನಡುವೆ ಸಂಘರ್ಷ ಶುರುವಾದಂತಿದೆ‌. ಇಂದು ವಿಶೇಷ ಅಧಿವೇಶನಕ್ಕಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ