ಯಲ್ಲಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಬಳಗಾರ ಕ್ರಾಸ್ ಬಳಿ ಮದ್ಯ ಪ್ಯಾಕೆಟ್ ಗಳನ್ನು ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಂದಕದಲ್ಲಿ ಪಲ್ಟಿಯಾಗಿದೆ.
ಕಲಬುರ್ಗಿಯಿಂದ ಉಡುಪಿಗೆ ಸಾರಾಯಿ ಪಾಕೇಟ್ ತುಂಬಿದ್ದ ಲಾರಿ ಆರತಿಬೈಲ್ ಘಟ್ಟದ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಹಳ್ಳದ ಪಕ್ಕದ ಕಂದಕದಲ್ಲಿ ಬಿದ್ದು ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ.
ಲಾರಿ ಚಾಲಕನಿಗೆ ಅಲ್ಪಪ್ರಮಾಣದ ಗಾಯವಾಗಿದೆ. ನಿರ್ವಾಹಕ ಲಾರಿಯಲ್ಲಿ ಸಿಕ್ಕಿ ಒದ್ದಾಡಿದ್ದು,ತಾಸು ಗಟ್ಟಲೆ ಒದ್ದಾಡಿ ಹೊರತೆಗೆಯಲಾಗಿದೆ.ಆತನ ಕೈಕಾಲು ಮುರಿದಿದ್ದು,ಗಂಭೀರ ಗಾಯಗೊಂಡಿದ್ದಾನೆ.ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಲಾರಿ ಸಂಪೂರ್ಣ ನುಜ್ಜು ಗುಜ್ಜಾಗಿದೆ.ಲಾರಿಯಲ್ಲಿ1700 ಬಾಕ್ಸ್ ಮದ್ಯದ ಪ್ಯಾಕೆಟ್ ಗಳಿದ್ದು,ಅರ್ಧದಷ್ಟು ಒಡೆದು ಹಾಳಾಗಿದೆ.ಸುತ್ತ ಮುತ್ತಲಿನ ದಾರಿ ಹೋಕರರಿಗೆ ಎಣ್ಣೆ ಪ್ರಿಯರಿಗೆ ಹಬ್ಬ ಆಗಿದ್ದು, ಹಲವನ್ನು ದೋಚಲಾಗಿದೆ.