ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಗಿದ ನಂತರ ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅನುಮತಿ ನೀಡಿದೆ.
ಪ್ರತಿ ಯೂನಿಟ್‌ಗೆ 70 ಪೈಸೆ ಬೆಲೆ ಏರಿಕೆ ಮಾಡಲು ಕೆಇಆರ್‌ಸಿ ಅನುಮನೋದನೆ ನೀಡಿದ್ದು, ಹೊಸ ದರಗಳು ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಯಾಗಲಿದೆ.
ವಿದ್ಯುತ್ ವಿತರಣಾ ಕಂಪನಿಗಳು ಪ್ರತಿ ಯೂನಿಟ್‌ಗೆ 146 ಪೈಸೆ ಬೆಲೆ ಹೆಚ್ಚಿಸಬೇಕೆಂದು ಕೋರಿದ್ದವು. ಅವುಗಳ ಕೋರಿಕೆಯನ್ನು ಮನ್ನಿಸದೇ ಅರ್ಧಕ್ಕಿಂತ ಕಡಿಮೆ ಮೊತ್ತದ ಹೆಚ್ಚಳಕ್ಕೆ ಕೆಇಆರ್‌ಸಿ ಅನುಮೋದನೆ ನೀಡಿದೆ.
Laxmi News 24×7