Breaking News

ಹಾಡಹಗಲೇ ಕಾರ್ಪೊರೇಟರ್ ಪತಿಯನ್ನು ಗುಂಡಿಟ್ಟು ಹತ್ಯೆ

Spread the love

ವಿಜಯಪುರ: ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿಯಿರುವಾಗಲೇ ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆದಿದ್ದು, ಮಹಿಳಾ ಕಾರ್ಪೊರೇಟರ್ ಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹೈದರ್ ಅಲಿ ನದಾಫ್ ಗುಂಡಿನ ದಾಳಿಗೆ ಬಲಿಯಾದವರು. ಹೈದರ್ ವಾರ್ಡ್ ನಂಬರ್ 19ರ ಪಕ್ಷೇತರ ಪಾಲಿಕೆ ಸದಸ್ಯೆ ನತಾಶ್ ಅವರ ಪತಿ ಎಂದು ತಿಳಿದುಬಂದಿದೆ.

ಹೈದರ್ ಅಲಿ ನದಾಫ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಲ್ಲಿ ಬಿದ್ದಿದ್ದ ಹೈದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಲನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಖಮೇನಿ ಹತ್ಯೆ ಪ್ರತಿಭಟನೆಗಳ ಬಗ್ಗೆ ಪೋಸ್ಟ್‌ – ಕಾಶ್ಮೀರ ಸಂಸದರ ವಿರುದ್ಧ ಎಫ್‌ಐಆರ್‌

Spread the loveಶ್ರೀನಗರ: ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ  ಹತ್ಯೆ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ