Breaking News

ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತನ ನಿವಾಸದ ಮೇಲೆ ಐಟಿ ದಾಳಿ

Spread the love

ಧಾರವಾಡ : ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಪ್ರಶಾಂತ್​ ಕೇಕರೆ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಿಲ್ಲೆಯ ಸಪ್ತಾಪುರ ಬಡಾವಣೆಯ ಕೃಷಿ ಪಾರ್ಕ್‌ನಲ್ಲಿರುವ ಕೇಕರೆ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ವಿವಿಧ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿಯೂ ಪ್ರಶಾಂತ್​ ಕೇಕರೆ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಚುನಾವಣೆ ಹೊತ್ತಿನಲ್ಲಿ ಮತ್ತೆ ವಿನಯ್​ ಕುಲಕರ್ಣಿಗೆ ಐಟಿ ಅಧಿಕಾರಿಗಳು ಶಾಕ್​ ನೀಡಿದ್ದು, ಈ ಸಂದರ್ಭದಲ್ಲಿ ಇದೆಲ್ಲ ಸಹಜ ಎಂದ ಪ್ರಶಾಂತ್​ ಕೇಕರೆ ಅಧಿಕಾರಿಗಳಿಗೆ ಮನೆ ಕೀ ನೀಡಿ ಮನೆಯ ಒಳಗಡೆ ತೆರಳಿದ್ದಾರೆ.


Spread the love

About Laxminews 24x7

Check Also

ಗೋವಿನ ಗೆಜ್ಜೆಯಲ್ಲಿ ನಿರ್ಮಾಣವಾಗಿರುವ ಗಣೇಶನ ಮೂರ್ತಿ

Spread the loveದಾವಣಗೆರೆ : ಗಣೇಶ ಹಬ್ಬ ಬಂತು ಎಂದರೆ ಸಾಕು ತರಹೇವಾರಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಿ ವಿಘ್ನ ನಿವಾರಕ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ