ಜಮಖಂಡಿ: ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಈ ಮಧ್ಯ ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಇನ್ನು ಜಮಖಂಡಿ ಬಿಜೆಪಿ ಅಭ್ಯರ್ಥಿ ಜಗದೀಶ್ ಗುಡಗುಂಟಿ ಪರ ಬಿರುಸಿನ ಮತ ಬೇಟೆಯಲ್ಲಿ ತೊಡಗಿರುವ ಶಾಸಕ ಬಸನ್ಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಇನ್ನು ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ್ ಕಾಂಗ್ರೆಸ್ನವರು ಯಾರೂ ವೀರಸಾವರ್ಕರ ಚಪ್ಪಲಿ ದೂಳಿಗೂ ಸಮನಲ್ಲ. ಜಮಖಂಡಿ ನಗರದಲ್ಲಿ ವೀರಸಾವರ್ಕರ್ ಹೆಸರು ಇಡಲು ಇಲ್ಲಿನ ಶಾಸಕರು(ಆನಂದ್ ಸಿದ್ದು ನ್ಯಾಮಗೌಡ) ವಿರೋಧಿಸುತ್ತಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ದೇಶದ್ರೋಹಿ ಸಂಘಟನೆಗಳಾ PFI ಹಾಗೂ SDPI ಮೇಲಿನ ಕೇಸುಗಳನ್ನು ಹಿಂಪಡೆದಿದ್ದರು ಎಂದು ಭಾಷಣ ಮಾಡುವ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಕರ್ನಾಟಕದಲ್ಲಿ ಬೊಮ್ಮಾಯಿ ಸರ್ಕಾರದ ನೇತೃತ್ವದಲ್ಲಿ ಶಾಶ್ವತ ನೀರಾವರಿ ಯೋಜನೆ, ಗೋಹತ್ಯೆ ನಿಷೇಧ ಸೇರಿದಂತೆ ಅನೇಕ ಜನಪರ ಕಾರ್ಯ ಮಾಡಿದ್ದೇವೆ.
ಜಮಖಂಡಿ ಭಾಗದಲ್ಲಿ ಅಭಿವೃದ್ದಿಯ ವಿಚಾರವಾಗಿ ಸಾಕಷ್ಟು ಬೇಡಿಕೆಗಳಿವೆ ಒಂದು ಬದಲಾವಣೆ ಬೇಕಾಗಿದೆ ಎಂದು ಮಾತನಾಡುವ ವೇಳೆ ಅಭಿಪ್ರಾಯಪಟ್ಟಿದ್ದಾರೆ.