Breaking News

16 ಕ್ಷೇತ್ರಗಳಲ್ಲಿ 16ಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧೆ: ಆ ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರ ಬಳಕೆ

Spread the love

 ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 16 ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಲಿರುವ ಕಾರಣ ಆ ಕ್ಷೇತ್ರಗಳಲ್ಲಿ ಎರಡೆರಡು ಇವಿಎಮ್​ಗಳನ್ನು ಬಳಸಲಾಗುತ್ತಿದೆ.

ಬೆಂಗಳೂರು: ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ 2 ಮತಯಂತ್ರಗಳನ್ನು ಬಳಸಲಾಗುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿ‌ನವಾಗಿತ್ತು. ಅದರಂತೆ ಸೋಮವಾರ 517 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸು ಪಡೆದು ಕಣದಿಂದ ಹಿಂದೆ ಸರಿದ್ದಾರೆ. ಆ ಮೂಲಕ ಸದ್ಯ ಕಣದಲ್ಲಿ ಒಟ್ಟು 2,613 ಅಭ್ಯರ್ಥಿಗಳಿದ್ದಾರೆ.

ಒಟ್ಟು 16 ಕ್ಷೇತ್ರಗಳಲ್ಲಿ 16ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಾಗಿ 16 ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರಗಳನ್ನು ಬಳಸಲಾಗುವುದು. ಒಂದು ಇವಿಎಂನಲ್ಲಿ ಗರಿಷ್ಠ 16 ಅಭ್ಯರ್ಥಿಗಳನ್ನು ಹೆಸರು ಹಾಗೂ ಚಿಹ್ನೆಗೆ ವ್ಯವಸ್ಥೆ ಇರುತ್ತದೆ. ಅದಕ್ಕಿಂತ ಹೆಚ್ಚುತ್ತಾ ಹೋದಂತೆ ಪ್ರತಿ 16 ಅಭ್ಯರ್ಥಿಗಳಿಗೆ ಒಂದರಂತೆ ಹೆಚ್ಚುವರಿ ಮತಯಂತ್ರಗಳ ಸಂಪರ್ಕ ಕಲ್ಪಿಸಬೇಕು. ಈ ಬಾರಿ 16ಕ್ಕೂ ಅಧಿಕ ಅಭ್ಯರ್ಥಿಗಳು ಒಟ್ಟು 16 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಆ 16 ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರಗಳನ್ನು ಬಳಸಲಾಗುತ್ತದೆ. ಬಳ್ಳಾರಿ ನಗರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 24 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಬಳಿಕದ ಸ್ಥಾನ ಹೊಸಕೋಟೆಗೆ ಬರುತ್ತದೆ. ಅಲ್ಲಿ ಈ ಬಾರಿ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಳಿಕ ಚಿತ್ರದುರ್ಗದಲ್ಲಿ 21 ಅಭ್ಯರ್ಥಿಗಳು, ಬೆಂಗಳೂರಿನ ಯಲಹಂಕದಲ್ಲಿ 20 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.

ಯಾವ ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರ ಬಳಕೆ?:

ರಾಜಾಜಿ ನಗರ- 18 ಅಭ್ಯರ್ಥಿಗಳು

ಹೊಸಕೋಟೆ- 23 ಅಭ್ಯರ್ಥಿಗಳು

ಯಲಹಂಕ- 20 ಅಭ್ಯರ್ಥಿಗಳು

ಬ್ಯಾಟರಾಯನಪುರ- 17 ಅಭ್ಯರ್ಥಿಗಳು

ಬಳ್ಳಾರಿ ನಗರ- 24 ಅಭ್ಯರ್ಥಿಗಳು

ಹನೂರು- 18 ಅಭ್ಯರ್ಥಿಗಳು

ಗೌರಿಬಿದನೂರು- 18 ಅಭ್ಯರ್ಥಿಗಳು

ಚಿಕ್ಕಮಗಳೂರು- 16 ಅಭ್ಯರ್ಥಿಗಳು

ಚಿತ್ರದುರ್ಗ- 21 ಅಭ್ಯರ್ಥಿಗಳು

ಹುಬ್ಬಳ್ಳಿ-ಧಾರವಾಡ ಕೇಂದ್ರ- 16 ಅಭ್ಯರ್ಥಿಗಳು

ಕೋಲಾರ- 18 ಅಭ್ಯರ್ಥಿಗಳು

ಗಂಗಾವತಿ- 19 ಅಭ್ಯರ್ಥಿಗಳು

ಶ್ರೀರಂಗಪಟ್ಟಣ- 17 ಅಭ್ಯರ್ಥಿಗಳು

ಕೃಷ್ಣರಾಜ- 17 ಅಭ್ಯರ್ಥಿಗಳು

ನರಸಿಂಹರಾಜ- 17 ಅಭ್ಯರ್ಥಿಗಳು

ರಾಯಚೂರು- 18 ಅಭ್ಯರ್ಥಿಗಳು


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ