ಹಾವೇರಿ: ಈಗಾಗಲೇ ಅನೇಕರು ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದರಿಂದ ವಿವಿಧ ಪಕ್ಷಗಳಿಗೆ ಸೇರ್ಪಡೆಗೊಂಡಿದ್ದಾರೆ. ಇದೇ ರೀತಿಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ನೆಹರು ಓಲೇಕಾರ್ ಕೂಡ ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರಿವುದಾಗಿ ಹೇಳಿದ್ದರು.
ಆದ್ರೇ ಇಂದು ಯೂಟರ್ನ್ ಹೊಡೆದು, ಬಿಜೆಪಿಯಲ್ಲೇ ಮುಂದುವರೆಯುವುದಾಗಿ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ನಾನು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಪಕ್ಷದಲ್ಲೇ ಇದ್ದೇನೆ. ಚುನಾವಣಾ ಪ್ರಚಾರಕ್ಕೂ ನನ್ನ ಸಿಎಂ ಬೊಮ್ಮಾಯಿ ಕರೆದಿಲ್ಲ. ಬೇರೆ ಯಾವುದೇ ಪಕ್ಷದ ಬಗ್ಗೆ ನನಗೆ ಒಲವಿಲ್ಲ ಎಂದರು.
ನಾನು ವಿಧಾನಸಭಾ ಪ್ರಚಾರಕ್ಕೆ ತೆರಳಿಲ್ಲ. ಮನೆಯಲ್ಲೇ ಇದ್ದೇನೆ. ನನ್ನ ನಿಲುವು ಬಿಜೆಪಿಯ ಪರವಾಗಿದೆ. ಸಿಎಂ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದು ಬೇಡ ಎಂದಿದ್ದಾರೆ. ಸಿಎಂ ಕರೆದ್ರೇ ಹೋಗುತ್ತೇನೆ ಎಂದರು.
ನನ್ನನ್ನು ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಬಿಜೆಪಿಯಲ್ಲೇ ಉಳಿಯುವಂತೆ ಒತ್ತಾಯಿಸಿದ್ದಾರೆ. ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇನೆ ಎಂಬುದಾಗಿ ಯೂಟರ್ನ್ ಹೊಡೆದಿದ್ದಾರೆ.
ಈ ಸಲ ಆಪರೇಷನ್ ಕಮಲ ನಡೆಯಲ್ಲ, ಕಾಂಗ್ರೆಸ್ 150 ಸೀಟ್ ಗೆಲ್ಲುತ್ತೆ – ರಾಹುಲ್ ಗಾಂಧಿ
ವಿಜಯಪುರ: ರಾಜ್ಯದಲ್ಲಿ ಈ ಬಾರಿ ಆಪರೇಷನ್ ಕಮಲ ನಡೆಯುವುದಿಲ್ಲ. ಕಾಂಗ್ರೆಸ್ ಪಕ್ಷವೇ ( Congress Party ) 150 ಸೀಟ್ ಗೆಲ್ಲಲಿದೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Congress Leader Rahul Gandhi ) ಹೇಳಿದ್ದಾರೆ.
Laxmi News 24×7