ಉಡುಪಿ: ಮೀನು ಹಿಡಿಯಲು ಹೋಗಿ ನದಿಯಲ್ಲಿ ಮುಳುಗಿ ಮೂವರು ಸಾವನ್ನಪ್ಪಿ ಓರ್ವ ಕಣ್ಮರೆಯಾಗಿರುವ ಘಟನೆ, ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ.
ಇಬಾಜ್, ಫಜಾನ್, ಸೂಫಾನ್ ಹಾಗೂ ಫರಾನ್ ಮೃತ ದುರ್ದೈವಿಯಾಗಿದ್ದು, ಕುಕ್ಕುಡೆ ಕಿಣಿಯರ ಕುದ್ರು ಸಮೀಪದ ನದಿಗೆ ಸಂಜೆ ದೋಣಿಯಲ್ಲಿ ಮೀನು ಹಿಡಿಯಲು ಏಳು ಯುವಕರ ತಂಡ ತೆರಳಿತ್ತು, ಈ ವೇಳೆ ಅವಘಡ ನಡೆದಿದೆ ಎನ್ನಲಾಗಿದೆ.
ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸಿದ ವೇಳೆಯಲ್ಲಿ, ಮೂವರು ಯುವಕರು ಸಾವಿಗೀಡಾಗಿದ್ದು, ಓರ್ವ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ.