ಬೆಂಗಳೂರು, ಏಪ್ರಿಲ್. 20: ಇದು ಚುನಾವಣಾ ಸಮಯ. ಈಗ ನಡೆಯುವ ಪ್ರತಿ ವಿಷಯಕ್ಕೂ ಚುನಾವಣೆಯ ಲಿಂಕಿರುತ್ತದೆ. ಅಂತಹದರಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನಿರಾಕರಿಸಿದರೇ ಅದರ ಸುತ್ತಲೂ ಒಂದು ರೀತಿಯ ಊಹಾಪೋಹಗಳು, ವದಂತಿಗಳು ಹರಡುವುದು ಸಾಮಾನ್ಯ. ಈಗ ಅಂತಹದ್ದೇ ವದಂತಿಗಳ ಕೋಟೆಯಲ್ಲಿ ಸುತ್ತಿಕೊಂಡಿದ ಶಿವಮೊಗ್ಗ ವಿಧಾನಸಭಾ ಕ್ಷೇತ್ರ.
ಎಸ್. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಕೆ.ಎಸ್ . ಈಶ್ವರಪ್ಪ. ತಮ್ಮ ಮಗಣಿಗಾಗಿ ಟಿಕೆಟ್ ಬೇಡಿಕೆಯಿಟ್ಟು, ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಹೈಕಮಾಂಡ್ ಈಶ್ವರಪ್ಪ ಪುತ್ರ ಕಾಂತೇಶ್ ಬದಲಿಗೆ ಚನ್ನಬಸವಪ್ಪಗೆ ಎನ್ನುವವರಿಗೆ ಟಿಕೆಟ್ ಘೋಷಣೆ ಮಾಡಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಈಶ್ವರಪ್ಪ ಜೊತೆಗೆ ಹಲವು ನಾಯಕರಿಗೂ ನಿರಾಸೆಯಾಗಿದೆ.
ಇದರ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಮಗಬಿ.ವೈ ವಿಜಯೇಂದ್ರಗೆಶಿಕಾರಿಪುರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಯಡಿಯೂರಪ್ಪ ಮಗನಿಗೆ ಟಿಕೆಟ್ ನೀಡುವ ಬಿಜೆಪಿ ಈಶ್ವರಪ್ಪ ಮಗನಿಗೆ ಏಕೆ ಟಿಕೆಟ್ ನೀಡಿಲ್ಲ ಎಂಬುದು ಶಿವಮೊಗ್ಗ ಜನರ ಜೊತೆಗೆ ಸಾಮಾನ್ಯರ ಪ್ರಶ್ನೆ ಕೂಡ. ಇದಕ್ಕೆ ಉತ್ತರ ಹುಡುಕ ಪ್ರಯತ್ನ ಈ ಲೇಖನದಲ್ಲಿದೆ.
*ಯಡಿಯೂರಪ್ಪ ಜಾತಿ ಪ್ರಾಬಲ್ಯ*
ಮಾಜಿ ಸಿಎಂ ಯಡಿಯೂರಪ್ಪ ಅವರು ಪ್ರಬಲ ಲಿಂಗಾಯತ ಸಮುದಾಯದವರು. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಮತಗಳಿರುವ ಪ್ರಭಾವಿ ಸಮುದಾಯವನ್ನು ಎದುರು ಹಾಕಿಕೊಳ್ಳುವುದು ಬಿಜೆಪಿಗೆ ಬೇಕಿಲ್ಲ ಎನಿಸುತ್ತದೆ.ಬಿಜೆಪಿಗೆ ರಾಜ್ಯದಲ್ಲಿ ನೆಲೆಯೂರಲು ಯಡಿಯೂರಪ್ಪ ಅವರೇ ಮುಖ್ಯ ಕಾರಣ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ, ಕುರುಬ ಸಮುದಾಯಕ್ಕೆ ಸೇರಿರುವ ಕೆಎಸ್ ಈಶ್ವರಪ್ಪ ಅವರು ಯಡಿಯೂರಪ್ಪ ಜೊತೆಗೆ ರಾಜಕೀಯ ಆರಂಭಿಸಿದ್ದರೂ ಕೂಡ ಅವರಷ್ಟು ಪಕ್ಷದಲ್ಲಿ ಪ್ರಭಾವಿಯಲ್ಲ.
ರಾಜ್ಯದಲ್ಲಿ ಮೂರನೇ ದೊಡ್ಡ ಸಮುದಾಯವಾಗಿರುವ ಕುರುಬ ಸಮುದಾಯ ಕೂಡಸಿದ್ದರಾಮಯ್ಯಅವರನ್ನು ತಮ್ಮ ನಾಯಕ ಎಂದು ಕೊಂಡಿದೆ.ಕೆ.ಎಸ್ ಈಶ್ವರಪ್ಪಅಲ್ಲಿಯೂ ಕೊಂಚ ಮಟ್ಟಿಗೆ ಸೋಲು ಕಂಡಿದ್ದಾರೆ. ಹೀಗಾಗಿ ಟಿಕೆಟ್ ನೀಡುವಾಗ ಯಾರಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕೋ ಅಷ್ಟು ನೀಡಲಾಗಿದೆ ಎನ್ನುತ್ತವೆ ಮೂಲಗಳು.
*ಕಾಂತೇಶ್‌ಗಿಂತ ವಿಜಯೇಂದ್ರ ಪರಿಚಿತ ಮುಖ*
ರಾಜ್ಯದಲ್ಲಿ ಹೆಚ್ಚು ಜನರಿಗೆ ಬಿ.ವೈ ವಿಜಯೇಂದ್ರ ಎಂದರೇ ತಕ್ಷಣ ತಿಳಿಯುತ್ತದೆ. ಅದರೆ, ಕೆ.ಇ. ಕಾಂತೇಶ್ ಎಂಬ ಹೆಸರು ಹಲವರಿಗೆ ಅಪರಿಚಿತ. ಈಶ್ವರಪ್ಪ ಮಗ ಎಂಬುದು ಕೂಡ ಯಾರಾದರೂ ಹೇಳಬೇಕು. ಜನಸಾಮಾನ್ಯರಲ್ಲಿ ಗುರುತಿಸಿಕೊಳ್ಳದ ಅಭ್ಯರ್ಥಿಗೆ ಟಿಕೆಟ್ ನೀಡಲು ಪಕ್ಷ ಚಿಂತಿಸಿದೆ ಎನ್ನಲಾಗಿದೆ. ಈಶ್ವರಪ್ಪ ತಮ್ಮ ಮಗನ ಮೇಲಿನ ವ್ಯಾಮೋಹಕ್ಕೆ ಟಿಕೆಟ್ ಕೇಳಿರಬಹುದು. ಅದರೆ, ಜನರಿಗೆ ಅಷ್ಟಾಗಿ ಪರಿಚಯವಿಲ್ಲದವರಿಗೆ ಮಣೆ ಹಾಕುವುದು ಬೇಡ ಎಂಬ ನಿರ್ಧಾರ ಹೈಕಮಾಂಡ್‌ಗೆ ಇರಬಹುದು.
*ವಿಜಯೇಂದ್ರ ಸಂಘಟನಾ ಚತುರತೆ*
ಈಶ್ವರಪ್ಪ ಅವರ ಮಗ ಕಾಂತೇಶ್‌ಗೆ ಹೋಲಿಸಿದರೇ ಬಿ.ಎಸ್ ಯಡಿಯೂರಪ್ಪ ಅವರ ಮಗ ಬಿ.ವೈ ವಿಜಯೇಂದ್ರ ಸಂಘಟನಾ ಚತುರ ಎನ್ನಬಹುದು. ಬಿಎಸ್ ಯಡಿಯೂರಪ್ಪ ಅವರಂತೇಯೇ ಮಕ್ಕಳು ಕೂಡ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು, ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಕಾರಣದಿಂದಲೂ ಹೈಕಮಾಂಡ್ ಅವರಿಗೆ ಮಣೆ ಹಾಕಿದೆ. ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಭಾಗಗಳಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಸಂಸದ ರಾಘವೇಂದ್ರ ಮತ್ತು ವಿಜಯೇಂದ್ರ ಮುಖ್ಯ ಪಾತ್ರ ವಹಿಸಿದ್ದಾರೆ.
ಇನ್ನು, ಟಿಕೆಟ್ ಸಿಗದ ಬಗ್ಗೆ ಮಾತನಾಡಿರುವ ಕೆ.ಎಸ್ ಈಶ್ವರಪ್ಪ, “ಬಿಜೆಪಿ ಮೇಲೆ ನನಗೆ ಸಿಟ್ಟಿಲ್ಲ. ಬಿಜೆಪಿ ಬಿಟ್ಟು ಹೋದವರನ್ನು ವಾಪಸ್ ಕರೆತರಬೇಕು. ನಮ್ಮ ಪಕ್ಷದ ಮೇಲೆ ಕೋಪಗೊಂಡುಕಾಂಗ್ರೆಸ್ಸೇರಿದವರನ್ನು ಬಿಜೆಪಿಗೆ ಮರಳಿ ಕರೆತರಬೇಕು. ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ” ಎಂದು ಹೇಳಿದ್ದಾರೆ.
ಇನ್ನು, ಟಿಕೆಟ್ ಕೈತಪ್ಪಿದ ಬಗ್ಗೆ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. “ನನಗೆ ಟಿಕೆಟ್ ಸಿಗದ ಹಿನ್ನೆಲೆ ಬೆಂಬಲಿಗರಿಗೆ ಬೇಸರ ಆಗಿದೆ. ಟಿಕೆಟ್ ಸಿಗದಿದ್ದಕ್ಕೆ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಅದರೆ, ನಮ್ಮ ತಂದೆ ಮತ್ತು ಸಂಘಟನೆ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷ ಒಳ್ಳೆಯ ಅವಕಾಶ ನೀಡುವ ವಿಶ್ವಾಸವಿದೆ” ಎಂದಿದ್ದಾರೆ.
ಆದರೆ, ಸಮಾಧಾನಕ್ಕೆ ಯಾರು ಏನೇ ಹೇಳಿದರೂ ಕೂಡ ಮಗನಿಗೆ ಟಿಕೆಟ್ ನೀಡುವ ಭರವಸೆಯಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ ಈಶ್ವರಪ್ಪ ನಿರ್ಧಾರ ಮಾತ್ರ ಆತುರದ ನಿರ್ಣಯ ಎನ್ನಲಾಗುತ್ತಿದೆ. ಈಶ್ವರಪ್ಪ ಅವರನ್ನು ಸಮಾಧಾನ ಪಡಿಸುವ ಸಲುವಾಗಿಯೇ ಅವರ ಕಟ್ಟಾ ಬೆಂಬಲಿಗ ಚನ್ನಬಸವಪ್ಪಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಸಿಗುವ ಬಗ್ಗೆ ಅನುಮಾನವಿದ್ದ ಕಾರಣ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.