Breaking News

ಸರಿಗಮಪ ಗ್ರ್ಯಾಂಡ್ ಫಿನಾಲೆ ಗೆದ್ದ ಹಳ್ಳಿ ಪ್ರತಿಭೆ: ಪ್ರಗತಿ ಬಡಿಗೇರ್ ಸಿಕ್ಕ ಬಹುಮಾನದ ಮೊತ್ತವೆಷ್ಟು?

Spread the love

ರಿಗಮಪ ಲಿಟಲ್ ಚಾಂಪ್ ಸೀಸನ್ 19 ಗ್ರ್ಯಾಂಡ್ ಫಿನಾಲೆ ಮುಗಿದಿದೆ. ಹಳ್ಳಿಯ ಪ್ರತಿಭೆ, ಹಾಡುಗಾರರ ಕುಟುಂಬದ ಪ್ರಗತಿ ವಿನ್ನರ್ ಆಗಿದ್ದಾರೆ. ಕೊಪ್ಪಳದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ, ಬೃಹತ್ ವೇದಿಕೆ ಮೇಲೆ ಪ್ರಗತಿ ಬಡಿಗೇರ್ ಟ್ರೋಫಿ ಸ್ವೀಕರಿಸಿದ್ದಾರೆ.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಗರಿ ಬಡಿಗೇರ್ ಕುಟುಂಬ ಕೂಡ ಆಸನರಾಗಿದ್ದರು. ಮಗಳು ವಿನ್ ಆದ ಕೂಡಲೇ ತಂದೆಯ ಕಣ್ಣಲ್ಲಿ ಆನಂದ ಬಾಷ್ಪ, ಹೆಮ್ಮೆ ಕಾಣಿಸುತ್ತಾ ಇತ್ತು.

ಕಾರ್ಯಕ್ರಮದ ವೇದಿಕೆಗೆ ಬಂದ ಮಹಾಗುರುಗಳಾದ ಹಂಸಲೇಖ ಅವರು ಇದು ರಂಗು ರಂಗಿನ ವೇದಿಕೆ. ಬಟ್ಟೆ, ಬಣ್ಣ, ಹೊಗಳಿಕೆ ಸೇರಿ ಎಲ್ಲವನ್ನು ಕೊಡ್ತೀವಿ. ಈ ಸರಿ ನಮ್ಮ ಜವಬ್ದಾರಿಗಿಂತ ನಿಮ್ಮ ಜವಬ್ದಾರಿ ಜಾಸ್ತಿ ಇದೆ. ಮಧ್ಯ ಮಧ್ಯ ಸರಿಯಾದ ತೀರ್ಪನ್ನು ಹೇಳ್ತಾ ಇದ್ರಿ. ಇದೊಂದು ನಮ್ಮ ಕುಟುಂಬದ ಕಾರ್ಯಕ್ರಮ ಎಂದಿದ್ದರು.

ಕೊನೆ ಕ್ಷಣದಲ್ಲಿ ಪ್ರಗತಿಗೆ ಶಾಕ್

ಪ್ರಗತಿ ಬಡಿಗೇರ್ ಬಂದಿದ್ದು ಒಂದು ಪುಟ್ಟ ಹಳ್ಳಿಯಿಂದ. ಆದರೆ ಅವರ ಕುಟುಂಬಸ್ಥರೆಲ್ಲರೂ ಸಂಗೀತ ದೇವಿಯನ್ನು ಒಲಿಸಿಕೊಂಡಿರುವವರೆ. ಮೊದಲ ಸೀಸನ್‌ನಲ್ಲಿಯೇ ಪ್ರಗತಿ ಅವರ ತಂದೆ, ತಂಗಿಯ ಧ್ವನಿಗೂ ಕರುನಾಡ ಜನತೆ ಮೆಚ್ಚಿದ್ದರು. ಗ್ರ್ಯಾಂಡ್ ಫಿನಾಲೆಗೆ ಬರುತ್ತೀನಿ ಎಂಬ ನಂಬಿಕೆಯನ್ನೆ ಇಟ್ಟುಕೊಂಡಿರಲಿಲ್ಲ ಪ್ರಗತಿ. ಆದರೆ, ವಿನ್ ಆಗಿದ್ದು ಅವರೇ. ಅದರಲ್ಲೂ ಶಿವಾನಿ ಮತ್ತು ಪ್ರಗತಿ ಇಬ್ಬರು ಗುರುಗಳ ಕೈಹಿಡಿದು ನಿಂತಿದ್ದಾಗ ವೇದಿಕೆ ಮೇಲೆ ನಿಂತಿದ್ದ ಪ್ರಗತಿ ಬಡಿಗೇರ್ ಗೂ ಟೆನ್ಶನ್ ಆಗಿತ್ತು.

ಪ್ರಗತಿ ಬಡಿಗೇರ್ ವಿನ್ನರ್

ಕೊಪ್ಪಳ ಜನ ನೆರೆದಿದ್ದ ವೇದಿಕೆ ಮೇಲೆ ನಿರೂಪಕಿ ಅನುಶ್ರೀ ಒಂದು ಎರೆಡು ಅಂತ ಕೌಂಟ್ ಮಾಡ್ತಾ ಇದ್ರು. ಆ ಕಡೆ ಮಹಾಗುರುಗಳಾದ ಹಂಸಲೇಖ ಪ್ರಗತಿ ಹಾಗೂ ಶಿವಾನಿ ಅವರ ಕೈ ಹಿಡಿದು ಎರಡ್ಮೂರು ಸಲ ಇಬ್ಬರ ಕೈಯನ್ನು ಮೇಲೆ ಎತ್ತೋದು, ಕೆಳಗೆ ಇಳಿಸೋದು ಮಾಡ್ತಾ ಇದ್ರು. ಕಡೆಗೂ ಮೇಲೆ ಕೈ ಹೋಗಿದ್ದು, ಪ್ರಗರಿ ಬಡಿಗೇರ್ ಕೈ. ಪ್ರಗತಿ ಅವರ ಮೆಂಟರ್ ಆಗಿದ್ದ ಇಂದು ನಾಗರಾಜ್‌ಗಂತು ಸಿಕ್ಕಾಪಟ್ಟೆ ಖುಷಿ ಆಗಿದ್ರು.

ಪ್ರಗತಿಯನ್ನು ಹೊಗಳಿದ ವಿಜಯ್ ಪ್ರಕಾಶ್

ವಿನ್ನರ್ ಹಾಗೂ ರನ್ನರ್ ಅಪ್ ಯಾರು ಎಂದು ಅನೌನ್ಸ್ ಮಾಡುವುದಕ್ಕೂ ಮುನ್ನ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಅವರು ವೇದಿಕೆ ಮೇಲೆ ಬಂದಿದ್ದರು. ಈ ವೇಳೆ ವಿಜಯ್ ಪ್ರಕಾಶ್ ಪ್ರಗತಿ ಬಡಿಗೇರ್ ಹೊಗಳಿದರು. “ಕೋಟಿ ಕೋಟಿ ಕನ್ನಡಿಗರನ್ನು ಪಡೆದಿರುವುದು ಗೆಲುವು. ಪ್ರಗತಿ ಈ ಹಂತಕ್ಕೆ ಬಂದು ನಿಂತಿರುವುದು ಸಂತಸ ತಂದಿದೆ. ನಿನ್ನೆಲ್ಲಾ ನೋವುಗಳನ್ನು ಮನಸ್ಸೊಳಗೆ ಇಟ್ಟುಕೊಂಡು, ನಗು ನಗುತ್ತಾ ಹಾಡುತ್ತೀಯಾ. ಈ ಸಣ್ಣ ವಯಸ್ಸಿನಲ್ಲಿಯೇ ತಂದೆ ತಾಯಿಯ ಜವಾಬ್ದಾರಿ ತೆಗೆದುಕೊಂಡಿದ್ದೀಯಾ. ತಂದೆ ತಾಯಿಯ ಆಸೆ ಈಡೇರಿಸುತ್ತೀಯಾ ಎಂಬ ನಂಬಿಕೆ ಇದೆ” ಎಂದು ಹಾರೈಸಿದ್ದಾರೆ.

ಪ್ರಗತಿಗೆ ಸಿಕ್ಕಿದ್ದು ಎಷ್ಟು ಲಕ್ಷ ಕ್ಯಾಶ್

ಇನ್ನು ಹಾಡು ಕುಟುಂಬದ ಹೆಮ್ಮೆಯ ಮಗಳಾದ ಪ್ರಗತಿ ಬಡಿಗೇರ್ ಅವರಿಗೆ 21 ಲಕ್ಷ ರೂ. ಬೆಲೆ ಬಾಳುವ 30-40 ಸೈಟ್ ಹಾಗೂ 4 ಲಕ್ಷ ರೂಪಾಯಿಯ ಕ್ಯಾಶ್ ಸಿಕ್ಕಿದೆ. ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಕಡೆಯಿಂದ ಟ್ರೋಫಿ ನೀಡಲಾಗಿದೆ. ಜೊತೆಗೆ ಗಾನ ಕೋಗಿಲೆ ಚಿತ್ರಾ ಕೈ ಜೊತೆಗೆ ಮೈಕ್ ಇರುವ ನೆನಪಿನ ಕಾಣಿಕೆಯೂ ಸಿಕ್ಕಿದೆ. ಈ ವೇಳೆ ಮಾತನಾಡಿದ ಪ್ರಗತಿ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ