Breaking News

ಹುಬ್ಬಳ್ಳಿ ನಿವಾಸದಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬೆಂಬಲಿಗರ ‌ಅಭಿಪ್ರಾಯ ಸಂಗ್ರಹ ಸಭೆ ಆರಂಭವಾಗಿದೆ.

Spread the love

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್​ ಶೆಟ್ಟರ್ ನಿವಾಸದಲ್ಲಿ ಬೆಂಬಲಿಗರ ‌ಅಭಿಪ್ರಾಯ ಸಂಗ್ರಹ ಸಭೆ ಆರಂಭವಾಗಿದೆ. ಹುಬ್ಬಳ್ಳಿ ಮಧುರಾ ಎಸ್ಟೇಟ್ ನಿವಾಸದಲ್ಲಿ ಸಭೆ ನಡೆಯುತ್ತಿದೆ.

ಸಭೆಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್ ನಿಮ್ಮೆಲ್ಲರ ಪ್ರೀತಿಗೆ ಅಭಿನಂದನೆ. ಕಳೆದ ಆರು ಭಾರಿ ನನ್ನ ಗೆಲುವಿಗೆ ನಿಮ್ಮೆಲ್ಲರ‌ ಆಶೀರ್ವಾದ ಮರೆಯಲು ಸಾಧ್ಯವಿಲ್ಲ. ಹುಬ್ಬಳ್ಳಿ ಧಾರವಾಡ ಜನತೆಯಿಂದ ರಾಜ್ಯಮಟ್ಟದ ನಾಯಕನಾಗಿ ಗುರುತಿಸಿಕೊಂಡಿದ್ದೇನೆ. ರಾಜ್ಯದ ಹಿತ, ಪಕ್ಷದ ಬೆಳವಣಿಗೆಗೆ ಕೆಲಸ ಮಾಡಿದ್ದೇನೆ. ವಿಪಕ್ಷ ‌ನಾಯಕ ಇದ್ದಾಗ ಇಡೀ‌ ಕರ್ನಾಟಕದಲ್ಲಿ ಯಡಿಯೂರಪ್ಪ, ಅನಂತ ಕುಮಾರ ಅವರ ನಾಯಕತ್ವದಲ್ಲಿ ನಾನು ನನ್ನದೇ ಆದ ಸೇವೆ ಮಾಡಿದ್ದೇನೆ ಎಂದರು.

ದೊಡ್ಡ ಪಾರ್ಟಿ ಆಗಿ ಬಿಜೆಪಿ ಬೆಳೆದಿದೆ. ಕೆಳಹಂತದದಿಂದ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಇಂದು ಪಕ್ಷ ಶಕ್ತಿಯುತವಾಗಿ ಬೆಳೆದಿದೆ. ಬಿಜೆಪಿ ನನಗೆ ಎಲ್ಲ ಸ್ಥಾನ ಕೊಟ್ಟಿದೆ. ಅದಕ್ಕೆ ಚಿರಋಣಿ ಆಗಿದ್ದೇನೆ. ಮೊದಲು ಮತ್ತು ಎರಡನೇ ಲಿಸ್ಟ್ ನಲ್ಲಿ ಶೆಟ್ಟರ್​ ಹೆಸರು ಬರಲಿಲ್ಲ ಅಂತಾ ಕರೆ ಬರ್ತಿವೆ. ರಾಜ್ಯದ ನಾಯಕರಾಗಿದ್ದರೂ ಟಿಕೆಟ್ ಕೊಡ್ತಿಲ್ಲ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ದೆಹಲಿಗೆ ಬನ್ನಿ ಅಂತಾ ಹೇಳಿದ್ರು. ಅದರಂತೆ ಮಾತನಾಡಿ ಬಂದೆ. ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಅವಕಾಶ ತಾನಾಗಿಯೇ ಬಂದಿವೆ. ಮತ್ತೊಮ್ಮೆ ಅವಕಾಶ ಕೊಡವಂತೆ ಹೇಳಿದ್ದೇನೆ. ಬೆಂಬಲಿಗರ ನಿರ್ಧಾರ ಎಲ್ಲವನ್ನೂ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದರು.

 

ಯಾರನ್ನೂ ಟೀಕೆ ಮಾಡಲ್ಲ: ಏಳು ಭಾರಿ ಸ್ಪರ್ಧೆ ಮಾಡಲು ಎಲ್ಲೆಲ್ಲಿ ಹೋಗಿದ್ದೇನೆ ಅಲ್ಲಿ ಜನರು ನೀವು ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೀರಿ ಎಂದು ಹೇಳುತ್ತಿದ್ದರು. ಹಾಗಾಗಿ ಅತ್ಯಂತ ಲೀಡ್ ನಲ್ಲಿ‌ ಗೆಲ್ಲಿಸುತ್ತೇನೆ ಅಂತಾ ಭರವಸೆ ನೀಡಿದ್ದಾರೆ. ನೀವು ಆಶೀರ್ವಾದ ಮಾಡದೇ ಇದ್ದರೆ ನಾನು ಜಿರೋ ಆಗಿರುತ್ತಿದ್ದೆ. ನನ್ನ ಹೀರೋ ಮಾಡಿದ್ದು ನೀವು. ಜನತೆ ಸೇವೆ ಸಲುವಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಯಾರನ್ನೂ ಟೀಕೆ ಮಾಡಲ್ಲ. ಮೋದಿ ಇಡೀ ದೇಶದ ಚಿತ್ರಣವನ್ನು ಬದಲಿಸಿದರು. ಅಮಿತ್‌ ಶಾ‌ ಕೂಡ ಉತ್ತಮ‌ ಕೆಲಸ ಮಾಡಿದ್ದಾರೆ. ಕೆಲವು ಪ್ರಮುಖರು ಭೇಟಿಯಾಗಿದ್ದಾರೆ. ನೀವು ನಿಮ್ಮ ಅಭಿಪ್ರಾಯ ಹೇಳಿ ನನಗೆ ನೈತಿಕತೆ ಬೆಂಬಲ ಕೊಟ್ಟಿದ್ದೀರಿ. ಅದನ್ನ ಮರೆಯುವುದಿಲ್ಲ. ಈಗ ಕೇಂದ್ರ ಸಚಿವ ಜೋಶಿ, ಶಂಕರ ಪಾಟೀಲ ಮುನೇನಕೊಪ್ಪ ಬಂದಿದ್ದರು. ನಡ್ಡಾ ಮಾತನಾಡಿದ್ದಾರೆ ಎಂದರು.

ಟಿಕೆಟ್​​ ಸಿಗುವ ಭರವಸೆ ಇದೆ: ಇದು ಹುಬ್ಬಳ್ಳಿ ನಗರದ ಸ್ವಾಭಿಮಾನ ಪ್ರಶ್ನೆ. ಇಂದು ನನಗೆ ಟಿಕೆಟ್​​ ಸಿಗುವ ಭರವಸೆ ಇದೆ ಎಂದರು. ಅದಕ್ಕೆ ನಿಮ್ಮನ್ನು ಕರೆಸಿದ್ದೇನೆ. ಎಲ್ಲವನ್ನೂ ಅವಲೋಕನ ಮಾಡಿ‌ ಒಂದು ನಿರ್ಧಾಕ್ಕೆ ಬನ್ನಿ ಅಂತಾ ವರಿಷ್ಠರಿಗೆ ಹೇಳಿದ್ದೇನೆ. ನಮಗೆ ಎಷ್ಟು ಸಂಕಟ ಆಗಿದೆ ಗೊತ್ತಿಲ್ಲ. ಇಡೀ‌ ರಾಜ್ಯದ ಜನರು ನನಗೆ ಕೇಳುತ್ತಿದ್ದಾರೆ. ಯಾಕೆ ನಿಮಗೆ ಇಷ್ಟು ಅನ್ಯಾಯ ಮಾಡ್ತಿದ್ದಾರೆ ಅಂತಾ?. ನಿಮ್ಮ ಅಭಿಪ್ರಾಯ ಹೇಳಿ ಎಂದು ಶೆಟ್ಟರ್​ ಜನರಿಗೆ ಮೈಕ್ ನೀಡಿದರು.

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ: ಶೆಟ್ಟರ್ ಕರ್ನಾಟಕ 2ನೇ ವಾಜಪೇಯಿ, ಅಜಾತ ಶತ್ರು. ಇಂತಹ ವ್ಯಕ್ತಿಗೆ ಹೈಕಮಾಂಡ್ ಟಿಕೆಟ್​ ನೀಡಲು ಯಾಕೆ ತಡಮಾಡುತ್ತಿದೆ ಗೊತ್ತಿಲ್ಲ. ನೀವು ಯಾವುದೇ ನಿರ್ಧಾರ ಕೈಗೊಂಡರು ‌ನಿಮ್ಮೊಂದಿಗೆ ಇರುತ್ತೇವೆ. ಒಂದು ವೇಳೆ ಟಿಕೆಟ್ ಕೊಡದೇ ಇದ್ದರೆ ರಸ್ತೆ ತಡೆದು‌ ಪ್ರತಿಭಟನೆ ಮಾಡಲಾಗುವುದು ಎಂದು ಬೆಂಬಲಿಗರು ಹೇಳಿದರು. ಇದೇ ವೇಳೆ ಮಹಿಳೆಯೊಬ್ಬರು ಟಿಕೆಟ್ ಕೊಡದೇ ಇದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆಂಬಲಿಗರ ಸಭೆಯಲ್ಲಿ‌ ಎಚ್ಚರಿಕೆ ನೀಡಿದ್ದಾರೆ.

ಶೆಟ್ಟರ್ ಮನವೊಲಿಕೆ ಯತ್ನ: ಟಿಕೆಟ್ ವಿಚಾರವಾಗಿ ಶೆಟ್ಟರ್ ಜತೆಗೆ ಸುದೀರ್ಘ ಚರ್ಚೆ ಮಾಡಿದ್ದೇನೆ. ಅವರಿಗೆ ಟಿಕೆಟ್ ನೀಡುವ ವಿಚಾರವನ್ನು ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಟಿಕೆಟ್ ವಿಚಾರಕ್ಕೆ ಚರ್ಚೆ ನಡೆಯುತ್ತಿದೆ. ಅವರು ಪಕ್ಷಕ್ಕಾಗಿ 30 ವರ್ಷ ಸೇವೆ ಸಲ್ಲಿಸಿದ್ದಾರೆ. ಇದೇ ರೀತಿ ಅವರ ಸೇವೆ ಮುಂದುವರೆಯಲಿದೆ. ಅವರು ಪಕ್ಷದಲ್ಲಿ ಇರಲಿದ್ದಾರೆ ಮತ್ತೆ ಈ ಬಗ್ಗೆ ಕೇಂದ್ರದ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಪಕ್ಷ ಬಿಡುವ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು.


Spread the love

About Laxminews 24x7

Check Also

ಪುರುಷರಿಗೆ ಸಾರಿಗೆ ಬಸ್ ಗಳಲ್ಲಿ ‘ಉಚಿತ ಪ್ರಯಾಣ’ ಪ್ರಸ್ತಾವನೆ ಸದ್ಯಕ್ಕೆ ಇಲ್ಲ : ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

Spread the love ಹುಬ್ಬಳ್ಳಿ : ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಕ್ಕಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ