Breaking News

ಪರಿಷತ್ ನಲ್ಲಿ ಬಹುಮತ ಕುಸಿತದ ಚಿಂತೆಯಲ್ಲಿ ಬಿಜೆಪಿ

Spread the love

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಗೊಂದಲದಲ್ಲಿ ಅತೃಪ್ತಿಯ ಭುಗಿಲೆಬ್ಬಿಸಿಕೊಂಡಿರುವ ಬಿಜೆಪಿ ಇದೀಗ ವಿಧಾನ ಪರಿಷತ್ ನಲ್ಲಿ ಬಹುಮತ ಕಳೆದುಕೊಳ್ಳುವ ಆತಂಕದಲ್ಲಿ ಮುಳುಗಿದೆ.

75 ಸದ್ಯಬಲ ಹೊಂದಿರುವ ವಿಧಾನ ಪರಿಷತ್ ನಲ್ಲಿ ಬಹುಮತಕ್ಕೆ 38 ಸ್ಥಾನಗಳನ್ನು ಹೊಂದುವುದು ಅಗತ್ಯ. ಪ್ರಸ್ತುತ ಕಾಂಗ್ರೆಸ್ 26, ಜೆಡಿಎಸ್ 8 ಸದಸ್ಯರನ್ನು ಹೊಂದಿದ್ದು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಒಬ್ಬರು ಸಭಾಪತಿ ಇದ್ದು, ಮೂರು ಸ್ಥಾನಗಳು ಖಾಲಿ ಇವೆ. ಹಲವು ವರ್ಷಗಳ ನಂತರ 39 ಸದಸ್ಯಬಲದೊಂದಿಗೆ ಬಹುಮತ ಪಡೆದಿದ್ದ ಬಿಜೆಪಿಯ ಅತೃಪ್ತ ಎಂಎಲ್ ಸಿಗಳ ಸರಣಿ ರಾಜೀನಾಮೆ ಇದೀಗ ಬಹುಮತದ ಬಲವನ್ನು ಕರಗಿಸಿದೆ.

ಪರಿಷತ್ ಸದಸ್ಯ ಆರ್.ಶಂಕರ್ ಅವರು ರಾಜೀನಾಮೆ ನೀಡುತ್ತಿದ್ದಂತೆ ಪರಿಷತ್‍ನಲ್ಲಿ ಬಿಜೆಪಿ ಬಲ 36ಕ್ಕೆ ಇಳಿದಿತ್ತು. ಅವರ ಬೆನ್ನಿಗೇ ಲಕ್ಷ್ಮಣ ಸವದಿ ರಾಜೀನಾಮೆ ನೀಡುತ್ತಿದ್ದಂತೆ 35ಕ್ಕೆ ಇಳಿದಿದೆ. ರಾಣೇಬೆನ್ನೂರು ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಆರ್. ಶಂಕರ್ ಸಹ ಅತೃಪ್ತಿಯಿಂದ ರಾಜೀನಾಮೆ ನೀಡಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಬಾಬುರಾವ ಚಿಂಚನಸೂರ್ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿ ಬಹುಮತ ಕಳೆದುಕೊಂಡಿದೆ. ಇತ್ತ ಶಿವಮೊಗ್ಗದಿಂದ ಟಿಕೆಟ್ ಕೈತಪ್ಪಿದಲ್ಲಿ ಆಯನೂರು ಮಂಜುನಾಥ ಕೂಡ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.

ಇದೀಗ ಯಾವುದೇ ಮಸೂದೆಗಳ ಅಂಗೀಕಾರಕ್ಕೆ ತೊಡಕಾಗಲಿದ್ದು ಬಿಜೆಪಿಯ ಟಿಕೆಟ್ ಹಂಚಿಕೆ ಪ್ರಹಸನ ಹತ್ತು ಹಲವು ಸಂದಿಗ್ಧಗಳನ್ನು ಸೃಷ್ಟಿಸಿದೆ.


Spread the love

About Laxminews 24x7

Check Also

ಮಹಾನ್ ನಾಯಕರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ಮಹದಾಸೆಯಿಂದ ಸರ್ಕಾರಉರುಳಿಸಲು ಸಾವಿರ ಕೋಟಿ ತೆಗೆದಿಟ್ಟಿದ್ದಾರೆ: ಯತ್ನಾಳ

Spread the love ದಾವಣಗೆರೆ: ಮಹಾನ್ ನಾಯಕರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ಮಹದಾಸೆಯಿಂದ ರಾಜ್ಯ ಸರ್ಕಾರವನ್ನು ಉರುಳಿಸಲು ಸಾವಿರ ಕೋಟಿ ತೆಗೆದಿಟ್ಟಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ