Breaking News

ಕಲಬುರಗಿಯಲ್ಲಿ ತಡರಾತ್ರಿ ಕಾರು ಅಪಘಾತ : ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗೆ ಗಂಭೀರ ಗಾಯ

Spread the love

ಲಬುರಗಿ : ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರಿದ್ದ ಕಾರು ಅಪಘಾತವಾಗಿದ್ದು, ಅಪಘಾತದಲ್ಲಿ ಬಾಬುರಾವ್ ಚಿಂಚನಸೂರು ಗಾಯಗೊಂಡಿರುವ ಘಟನೆ ನಡೆದಿದೆ.

ತಡರಾತ್ರಿ 12.30 ರ ಸುಮಾರಿಗೆ ಕಲಬುರಗಿಯ ಆಕಾಶವಾಣಿ ಕೇಂದ್ರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿದ್ದು, ಬಾಬುರಾವ್ ಚಿಂಚನಸೂರು ಕಾಳು, ಮುಖಕ್ಕೆ ಗಾಯವಾಗಿದೆ.

ಕೂಡಲೇ ಅವರನ್ನು ಕಲಬುರಗಿಯ ಯನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾದಗಿರಿಯಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತವಾಗಿದೆ. ನಿದ್ದೆ ಮಂಪರಿನಲ್ಲಿದ್ದ ಕಾರು ಚಾಲಕ, ಕಾರು ಗುಂಡಿಗೆ ಬೀಳುತ್ತಿದ್ದಂತೆ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಅಪಘಾತದಲ್ಲಿ ಚಾಲಕ, ಗನ್ ಮ್ಯಾನ್ ಗೆ ಯಾವುದೇ ಗಾಯವಾಗಿಲ್ಲ. ಸದ್ಯ ಬಾಬುರಾವ್ ಚಿಂಚನಸೂರು ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ


Spread the love

About Laxminews 24x7

Check Also

ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ 2:1ರ ಅನುಪಾತ: ಗೆಜೆಟ್ ಅಧಿಸೂಚನೆ ಪ್ರಕಟ

Spread the loveಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಗೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿ ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಪ್ರಾಥಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ