ಹಾವೇರಿ: ಅಮುಲ್ ಹಾಲಿನ ನಂತರ ಇದೀಗ ಗುಜರಾತ್ ಮೆಣಸಿನಕಾಯಿ ಸರದಿಯಾಗಿದೆ. ಸದ್ಯ ರಾಜ್ಯದ ಮಾರುಕಟ್ಟೆಗೆ ಅಮುಲ್ ಬಳಿಕ ಈ ಮೆಣಸಿನಕಾಯಿ ತಲೆ ನೋವಾಗಿದೆ. ರಾಜ್ಯದ ಮೆಣಸಿನಕಾಯಿ ಮಾರುಜಕಟ್ಟೆಗೆ ಕಾಲಿಟ್ಟಿರುವ ಗುಜರಾತಿ ಮೆಣಸಿನಕಾಯಿಯ ‘ಪುಷ್ಪ’ – ಲಾಲಿ ಎಂದೂ ಕರೆಯುತ್ತಾರೆ – ಏಷ್ಯಾದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಬ್ಯಾಡಗಿಯಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸುತ್ತಿದೆ.
ಮೂಲಗಳ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಕನಿಷ್ಠ 20,000 ಕ್ವಿಂಟಲ್ ಗುಜರಾತಿ ಮೆಣಸಿನಕಾಯಿ ಮಾರಾಟವಾಗಿದೆ. ಪುಷ್ಪಾ ಸ್ಥಳೀಯ ಡಬ್ಬಿ ಮತ್ತು ಕಡ್ಡಿ ತಳಿಗಳಿಗೆ ಪ್ರತಿಸ್ಪರ್ಧಿಯಲ್ಲದಿದ್ದರೂ, ಗುಜರಾತ್ ತಳಿಯ ದೊಡ್ಡ ಪ್ರಮಾಣದ ಸ್ಥಳೀಯ ಮಾರುಕಟ್ಟೆಯನ್ನು ತಲುಪಿದೆ. ಪುಷ್ಪ ಮೆಣಸಿನಕಾಯಿಗಳು ಸ್ಥಳೀಯ ತಳಿಗಳಿಗಿಂತ ಕೆಂಪಾಗಿ ಕಾಣುತ್ತವೆ, ಆದರೂ ಅವುಗಳು ತಮ್ಮ ಬಣ್ಣವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುವುದಿಲ್ಲ ಎನ್ನಲಾಗಿದೆ. ಕನಿಷ್ಠ 70 ಮೆಣಸಿನಕಾಯಿ ಮಾರಾಟಗಾರರು ಮಾರುಕಟ್ಟೆಯ ಸಮೀಪವಿರುವ ವಿವಿಧ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಗುಜರಾತ್ ಮೆಣಸಿನಕಾಯಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.