Breaking News

ಜೆಡಿಎಸ್ ನಡೆಯಿಂದ ವರುಣದಲ್ಲಿ ಸಿದ್ದರಾಮಯ್ಯಗೆ ನೀರು ಕುಡಿದಷ್ಟೇ ಸುಲಭ ಗೆಲುವು ಸಾಧ್ಯತೆ

Spread the love

ಮೈಸೂರು: ವರುಣ ಕ್ಷೇತ್ರದಲ್ಲಿ ಜೆಡಿಎಸ್ ನಡೆಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀರು ಕುಡಿದಷ್ಟೇ ಸುಲಭವಾಗಿ ಗೆಲುವು ದೊರಕಲಿದೆ ಎಂದು ಹೇಳಲಾಗುತ್ತಿದೆ.

ವರುಣ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಅಭಿಷೇಕ್ ಅವರು​ ತೆರೆಮರೆಯಲಿ ಸಿದ್ದುಗೆ ಸಹಾಯ ಮಾಡ್ತಿದ್ದಾರಾ ಎಂಬ ಅನುಮಾನ ಅವರ ನಡೆಯಿಂದ ಮೂಡಿದೆ.

ಏಕೆಂದರೆ, ಜೆಡಿಎಸ್​ ಅಭ್ಯರ್ಥಿ ದಿಢೀರ್​ ನಾಪತ್ತೆಯಾಗಿದ್ದಾರೆ.

 

ಜೆಡಿಎಸ್ ಮೊದಲ ಪಟ್ಟಿಯಲ್ಲೇ ವರುಣ ಕ್ಷೇತ್ರದ ಅಭ್ಯರ್ಥಿಯ ಹೆಸರು ಘೋಷಣೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಕೇವಲ ಒಂದು ಕ್ಷೇತ್ರದಲ್ಲಿ ಸಭೆ ನಡೆಸಿರುವ ಅಭಿಷೇಕ್, ಕಳೆದ ಒಂದು ವಾರದಿಂದ ಕ್ಷೇತ್ರದ ಜನರ ಕೈಗೆ ಸಿಗದೆ ನಾಪತ್ತೆಯಾಗಿರುದ್ದಾರೆ.

ಕ್ಷೇತ್ರದ ಜನರು ಫೋನ್ ಮಾಡಿದ್ರು ಕರೆ ಸ್ವೀಕರಿಸದೆ ಯಾರ ಕೈಗು ಸಿಗುತ್ತಿಲ್ಲ. ಪಕ್ಷದ ಮುಖಂಡರನ್ನು ಕೇಳಿದ್ರು ಸರಿಯಾದ ಉತ್ತರ ಸಿಗುತ್ತಿಲ್ಲ. ಅಭಿಷೇಕ್ ನಡೆಯಿಂದ ವರುಣ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಕಂಗಲಾಗಿದ್ದು, ವರಿಷ್ಟರಿಗೆ ದೂರು ನೀಡಲು ಮುಂದಾಗಿದ್ದಾರೆ.

ಒಟ್ಟಾರೆ ಜೆಡಿಎಸ್ ನಡೆಯಿಂದ ಸಿದ್ದರಾಮಯ್ಯಗೆ ನೀರು ಕುಡಿದಷ್ಟೇ ವರುಣ ಕ್ಷೇತ್ರದ ಗೆಲುವು ಸುಲಭವಾದಂತಿದೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ