ವಿಜಯಪುರ: ಚುನಾವಣಾ ಕರ್ತವ್ಯದಲ್ಲಿ ಲೋಪವೆಸಗಿದ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರನ್ನು ಅಮಾನತ್ತುಗೊಳಿಸಿ ಆದೇಶ ಹೊರಬಿದ್ದಿದೆ.
ಬರಟಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಅಪ್ಪಣ್ಣ ಸವದಿ ಹಾಗೂ ಕಳ್ಳಕವಟಗಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಅಲ್ಲಾಬಕ್ಷ ಇವರನ್ನು ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದದ್ದಕ್ಕೆ ಸೇವೆಯಿಂದ ಅಮಾನತ್ತು ಮಾಡಿ ವಿಜಯಪುರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ನೀಡಿದ್ದಾರೆ.
ಕಳೆದ 23-3-2023ರಿಂದ ಇಲ್ಲಿಯವರೆಗೆ ಅರ್ಜುಣಗಿ ಮತ್ತು ಚಿಕ್ಕಗಲಗಲಿ ಚೆಕ್‍ಪೋಸ್ಟ ಗಳಲ್ಲಿ ಕರ್ತವ್ಯ ನಿರ್ವಹಿಸದೇ ಮುಖ್ಯೋಪಾಧ್ಯಾಯರು ಅನಧಿಕೃತ ಗೈರಹಾಜರಾಗಿದ್ದರು. ಕರ್ತವ್ಯ ಲೋಪವೆಸಗಿರುವುದರಿಂದ ಇವರ ವಿರುದ್ದ ಇಲಾಖಾ ವಿಚಾರಣೆ ಬಾಕಿ ಇರಿಸಿ, ಅಮಾನತ್ತುಗೊಳಿಸಲಾಗಿದೆ.
Laxmi News 24×7