ಬಾಗಲಕೋಟೆ: ಒಳ ಮೀಸಲಾತಿ ರದ್ದುಪಡಿಸಿ, ಇಲ್ಲವೇ ವಿಷ ಕೊಡಿ ಎಂದು ಬಂಜಾರ ಸಮಾಜದ ಮುಖಂಡ ರಾಜು ಲಮಾಣಿ ಆಗ್ರಹಿಸಿದರು.
ಬಾಗಲಕೋಟೆಯಲ್ಲಿ ಪ್ರತಿಭಟನೆ ಮಾಡಿದ ಬಂಜಾರ ಸಮಾಜದ ಮುಖಂಡರು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಲರಾಮ ನಾಯ್ಕ ಮಾತನಾಡಿ, ಸರ್ಕಾರ ನಮಗೆ ಊಟ ಹಾಕಿತ್ತು. ಅದನ್ನ ಇವರು ಬೂಟುಗಾಲಿಲೇ ಒದ್ದಿದ್ದಾರೆ, ನಾವು ಜಾಡಿಸಿ, ಜಾಡಿಸಿ ಒದೆಯಲು ನಾವು ಸಿದ್ಧರಿದ್ದೇವೆ ಎಂದರು.
ಶೇ 100ರಷ್ಟು ಹೇಳುತ್ತೇನೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುವುದಿಲ್ಲ. ಆದರೆ, ನೇಣು ಹಾಕಿಕೊಳ್ಳುತ್ತೇನೆ ಎಂದರು
Laxmi News 24×7