Breaking News

₹40 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಎಸ್‌ಐ, ಕಾನ್‌ಸ್ಟೆಬಲ್‌ ಬಂಧನ

Spread the love

ರಾಣೆಬೆನ್ನೂರು: ವ್ಯಕ್ತಿಯೊಬ್ಬರಿಂದ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ₹ 40 ಸಾವಿರ ಲಂಚ ಪಡೆಯುತ್ತಿದ್ದಾಗ ಇಲ್ಲಿನ ಅಶೋಕನಗರ ಠಾಣೆ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್‌ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಪಿಎಸ್‌ಐ ಸುನೀಲ ತೇಲಿ, ವಾಹನ ಚಾಲಕ ಹಾಗೂ ಕಾನ್‌ಸ್ಟೆಬಲ್‌ ಸಚಿನ್‌ ಓಲೇಕಾರ ಸಿಕ್ಕಿಬಿದ್ದವರು.

ಇವರ ಜೊತೆಗೆ ಉಡುಪಿ ಟಿಸ್ಟಾಲ್‌ ಮಾಲೀಕ ಸಂತೋಷ್‌ ಶೆಟ್ಟಿ ಅವರನ್ನು ಲೋಕಾಯುಕ್ತ ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ದೂರುದಾರ ಸಿದ್ಧೇಶ್ವರ ನಗರದ ಅಫ್ರೋಜ್‌ ಅಹ್ಮದ್‌ ನೂರ ಅಹ್ಮದ್‌ಸಾಬ್‌ ಊದಗಟ್ಟಿ ಅವರಿಗೆ ಅಣ್ಣನ ಪತ್ನಿ ರೌನಕ್‌ ಖಾನ್‌ ಅವರೊಂದಿಗೆ ಮನೆ ಬಾಡಿಗೆ ವಿಚಾರದಲ್ಲಿ ವಿವಾದವಿತ್ತು. ರೌನಕ್‌ ರಾಣೆಬೆನ್ನೂರು ಠಾಣೆಯಲ್ಲಿ ದೂರು ನೀಡಿದ್ದರು.

ಈ ದೂರು ಹಿಂಪಡೆಯಲು ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ₹ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ₹ 40 ಸಾವಿರ ಹಣ ಕೊಡಲು ಒಪ್ಪಿಕೊಂಡು ಲಂಚದ ಹಣವನ್ನು ಆರೋಪಿ ಪರವಾಗಿ ಟಿ ಸ್ಟಾಲ್‌ ಮಾಲೀಕನ ಮೂಲಕ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದರು.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ