Breaking News

ವೃದ್ಧರಲ್ಲದವರಿಗೂ ವೃದ್ಧಾಪ್ಯ ವೇತನ ಕೊಡಿಸುವ ಕಳ್ಳಾಟ ನಡೆಸಿದ್ದ ‘ಚತುರ’ ಈಗ ಸಿಕ್ಕಿಬಿದ್ದಿದ್ದಾನೆ.

Spread the love

ಬೆಂಗಳೂರು: ವೃದ್ಧರಲ್ಲದವರಿಗೂ ವೃದ್ಧಾಪ್ಯ ವೇತನ ಕೊಡಿಸುವ ಕಳ್ಳಾಟ ನಡೆಸಿದ್ದ ‘ಚತುರ’ ಈಗ ಸಿಕ್ಕಿಬಿದ್ದಿದ್ದಾನೆ.

ಚತುರ್(45) ಬಂಧಿತ. ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಕಾರ್ಯಾಚರಿಸಿ ಈತನ ಕೃತ್ಯಗಳನ್ನು ಬಯಲಿಗೆಳೆದಿದ್ದಾರೆ.

ಆರೋಪಿ ಯಾರೇ ಹಣ ಕೊಟ್ಟರೂ ಅವರ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕವನ್ನೇ ತಿದ್ದಿ ಅವರಿಗೆ ವೃದ್ಧಾಪ್ಯ ವೇತನ ಕೊಡಿಸುವ ಕೆಲಸ ಮಾಡುತ್ತಿದ್ದ. ನಗರದಲ್ಲಿ ಮೂರು ಪ್ರತ್ಯೇಕ ಸ್ಟಾಲ್ ಗಳನ್ನು ತೆರದಿರುವ ಈತ ಇಲ್ಲಿಂದ ಸರಕಾರಿ ಯೋಜನೆಗಳ ಸೌಲಭ್ಯ ಕೊಡಿಸುವ ಮಧ್ಯವರ್ತಿ ಕೆಲಸ ಮಾಡಿಕೊಂಡಿದ್ದ.

ಸರಕಾರದ ನಿಯಮದಂತೆ 60 ಅಥವಾ ಮೇಲ್ಪಟ್ಟವರಿಗೆ ವೃದ್ಧಾಪ್ಯ ವೇತನ ನೀಡಲಾಗುತ್ತದೆ. ಆದರೆ ಚತುರ್ ಕೆಲ ನಿರ್ದಿಷ್ಟ ಸಾಫ್ಟ್ ವೇರ್ ಗಳ ದುರುಪಯೋಗ ಪಡೆದು ಇ- ಆಧಾರ್ ಕಾರ್ಡ್ ಪಡೆದು ಅಲ್ಲಿಂದ 40 50 ವರ್ಷದವರಿಗೂ ವೃದ್ಧಾಪ್ಯ ವೇತನ ಕೊಡಿಸುತ್ತಿದ್ದ.

ಈತನ ರಾಜಾಜಿನಗರ ಹಾಗೂ ಕೆಂಗೇರಿಯ ಸ್ಟಾಲ್ ಗಳ ಮೇಲೆ ದಾಳಿ ಮಾಡಿರುವ ಸಿಸಿಬಿ ತಂಡ 6 ಕಂಪ್ಯೂಟರ್ ಗಳು, 1 ಲ್ಯಾಪ್ ಟಾಪ್, 4 ಮೊಬೈಲ್ ಗಳು, 205 ವೃದ್ಧಾಪ್ಯ ವೇತನ ಮಂಜೂರಾತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ