Breaking News

78 ಯೋಜನೆಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ಸಮಿತಿಯಿಂದ ಅನುಮೋದನೆ; ಸೃಷ್ಟಿಯಾಗಲಿವೆ 13,917 ಉದ್ಯೋಗಗಳು!

Spread the love

ಬೆಂಗಳೂರು: ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಏಕಗವಾಕ್ಷಿ ಸಮಿತಿ, ಬಂಡವಾಳ ಹೂಡಿಕೆ ಮತ್ತು ಉದ್ಯೋಗಾವಾಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 78 ಯೋಜನೆಗಳ 5298.69 ಕೋಟಿ ರೂ.

ಬಂಡವಾಳ ಹೂಡಿಕೆಗೆ ಇಂದು (ಮಾ.19) ಅನುಮೋದನೆ ನೀಡಿದೆ.

ಒಟ್ಟು 78 ಯೋಜನೆಗಳಿಂದ 5298.69 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು ಇದರ ಪರಿಣಾಮವಾಗಿ, 13917 ಜನರಿಗೆ ಉದ್ಯೋಗಗಳು ಲಭಿಸಲಿವೆ. ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ. ಗೂ ಹೆಚ್ಚಿನ ಬಂಡವಾಳ ಹೂಡಿಕೆಯ 17 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 3552.66ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 6933 ಜನರಿಗೆ ಉದ್ಯೋಗ ಲಭಿಸಲಿದೆ. 15 ಕೋಟಿ ರೂ. ಯಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 59 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಲಾಗಿದ್ದು ಒಟ್ಟು 1542.88 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 6984 ಜನರಿಗೆ ಉದ್ಯೋಗ ಸೃಜನೆಯಾಗಲಿದೆ. ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್​ ನಿರಾಣಿ ತಿಳಿಸಿದರು. ಹೆಚ್ಚುವರಿ ಬಂಡವಾಳ ಹೂಡಿಕೆಯ ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅನುಮೋದಿಸಿದ್ದು, 203.15 ಕೋಟಿ ರೂ. ಹೂಡಿಕೆಯಾಗಲಿದೆ.

1. ವಿಐಎನ್‌ಪಿ(VINP) ಡಿಸ್ಟಿಲರೀಸ್ ಮತ್ತು ಶುಗರ್ಸ್ ಪ್ರೈ. ಲಿಮಿಟೆಡ್, (ಯುಎನ್‌ಐಟಿ(UNIT II)), ಸ್ಥಳ: ಉತ್ತರ ಕನ್ನಡ, ಹೂಡಿಕೆ – 499.25, ಕೋಟಿ ರೂ , ಉದ್ಯೋಗ – 470
2. ಮುತ್ತಯ್ಯ ಪಾನೀಯ ಮತ್ತು ಮಿಠಾಯಿ ಪ್ರೈವೇಟ್ ಲಿಮಿಟೆಡ್, ಸ್ಥಳ: ತಮಿಳುನಾಡು, ಹೂಡಿಕೆ – 475 ಕೋಟಿ ರೂ, ಉದ್ಯೋಗ – 298
3. ಸಿಲೋನ್ ಬೆವರೇಜ್ ಕ್ಯಾನ್ ಪ್ರೈವೇಟ್ ಲಿಮಿಟೆಡ್,ಸ್ಥಳ: ತಮಿಳುನಾಡು, ಹೂಡಿಕೆ – 439.18 ಕೋಟಿ ರೂ, ಉದ್ಯೋಗ – 500
ಅನ್ವಿಶ್ ವೆಂಚರ್ಸ್, ಸ್ಥಳ: ಬೆಂಗಳೂರು, ಹೋಡಿಕೆ – 488.20 ಕೋಟಿ ರೂ, ಉದ್ಯೋಗ -1050
4. ಏಂಆರ್‌ಎನ್‌(MRN) ಚಾಮುಂಡಿ ಕ್ಯಾನೆಪವರ್ ಮತ್ತು ಬಯೋಫೈನರೀಸ್ ಪ್ರೈವೇಟ್ ಲಿಮಿಟೆಡ್ , ಸ್ಥಳ: ಬಾಗಲಕೋಟೆ, ಹೂಡಿಕೆ -248.02 ಕೋಟಿ ರೂ , ಉದ್ಯೋಗ- 461
5. ವೀನಸ್ ಟೆಕ್ನಾಲಜೀಸ್, ಸ್ಥಳ: ಬೆಂಗಳೂರು – ಹೋಡಿಕೆ- 249.70 ಕೋಟಿ ರೂ, ಉದ್ಯೋಗ – 700
6. ಶಿರಗುಪ್ಪಿ ಶುಗರ್ ವರ್ಕ್ಸ್ ಲಿಮಿಟೆಡ್ KAGWAD, ಸ್ಥಳ: ಬೆ ಳಗಾವಿ, ಹೂಡಿಕೆ -180 ಕೋಟಿ ರೂ, ಉದ್ಯೋಗ – 670
7. ಲ್ಯಾಂಡ್ಸ್ಕಿ ಆಟೋಮೇಷನ್ ಮತ್ತು ಪ್ರಕ್ರಿಯೆ ಪರಿಹಾರಗಳು ಪ್ರೈವೇಟ್ ಲಿಮಿಟೆಡ್, ಸ್ಥಳ: ತೆಲಂಗಾಣ ಹೂಡಿಕೆ – 127.2 ಕೋಟಿ ರೂ, ಉದ್ಯೋಗ -365
8. ಶ್ರೀ ಕೇಶವ್ ಸಿಮೆಂಟ್ಸ್ ಮತ್ತು ಇನ್ಫ್ರಾ ಲಿಮಿಟೆಡ್ ಬೆಳಗಾವಿ, ಸ್ಥಳ: ಬೆಂಗಳೂರು, ಹೂಡಿಕೆ- 124 ಕೋಟಿ ರೂ, ಉದ್ಯೋಗ – 168
9. ಎಎಸ್‌ಕೆ(ASK) ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್, ಸ್ಥಳ : ಕೋಲಾರ, ಹೂಡಿಕೆ -117.7 ಕೋಟಿ ರೂ, ಉದ್ಯೋಗ – 700
10. ಪಂಚಾಮೃತ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಸ್ಥಳ: ಧಾರವಾಡ, ಹೂಡಿಕೆ – 98 ಕೋಟಿ ರೂ, ಉದ್ಯೋಗ – 86
11. ಅಗಸ್ತ್ಯ ಆಗ್ರೋ ಲಿಮಿಟೆಡ್, ಸ್ಥಳ: ಸಿಕಂದರಾಬಾದ್, ಹೂಡಿಕೆ – 95 ಕೋಟಿ ರೂ, ಉದ್ಯೋಗ – 204
12. ಯೋನೆಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ , ಸ್ಥಳ: ಬೆಂಗಳೂರು ಅರ್ಬನ್, ಹೂಡಿಕೆ – 92 ಕೋಟಿ ರೂ. ಉದ್ಯೋಗ – 475
13. ಯಾನಾ ಸೋಲಾರ್ ಪ್ರೈವೇಟ್ ಲಿಮಿಟೆಡ್, ಸ್ಥಳ: ಬೆಂಗಳೂರು, ಹೂಡಿಕೆ – 90.14 ಕೋಟಿ ರೂ, ಉದ್ಯೋಗ- 200
14. ಶಾಲಿಮಾರ್ ಇನ್ಸೆನ್ಸ್ ಪ್ರೈವೇಟ್ ಲಿಮಿಟೆಡ್,ಸ್ಥಳ: ಬೆಂಗಳೂರು, ಹೂಡಿಕೆ – 81.27 ಕೋಟಿ ರೂ, ಉದ್ಯೋಗ – 91
15. ಇಶಾ ಫುಡ್ಸ್‌ ಬೆಂಗಳೂರು , ಸ್ಥಳ: ಬೆಂಗಳೂರು ,ಹೂಡಿಕೆ – 80 ಕೋಟಿ ರೂ, ಉದ್ಯೋಗ – 295
16. ಮಿಡಾಜ್ (MiDaz) ಹೋಮ್ ಕ್ರಾಫ್ಟ್ , ಸ್ಥಳ: ಬೆಂಗಳೂರು ಅರ್ಬನ್, ಹೂಡಿಕೆ – 68 ಕೋಟಿ ರೂ, ಉದ್ಯೋಗ -200

 


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ