ಕುಣಿಗಲ್: ತಾಲ್ಲೂಕಿನ ಅಂಚೇಪಾಳ್ಯದ ಚೆಕ್‌ಪೋಸ್ಟ್ ಬಳಿ ಶುಕ್ರವಾರ ಕಂಟೇನರ್ ತಪಾಸಣೆ ವೇಳೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಭಾವಚಿತ್ರವಿದ್ದ 1,142 ಕುಕ್ಕರ್ ಬಾಕ್ಸ್‌ಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ವಶಕ್ಕೆಪಡೆದಿದ್ದಾರೆ.
ಕನಕಪುರದಿಂದ ಹೆಬ್ಬೂರಿಗೆ ಕಂಟೇನರ್ ಹೋಗುತ್ತಿತ್ತು. ಕುಕ್ಕರ್‌ಗಳ ಬಿಲ್ ಬೇರೆ ವ್ಯಕ್ತಿಯ ಹೆಸರಿನಲ್ಲಿದೆ. ಶಾಸಕರ ಬೆಂಬಲಿಗರು ಖರೀದಿ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಕುಕ್ಕರ್ ಬೆಲೆ ₹ 1,899 ಎಂದು ಅಂದಾಜಿಸಿದ್ದು, ಒಟ್ಟು ₹ 21.68 ಲಕ್ಷ ಮೌಲ್ಯದ ಕುಕ್ಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.