Breaking News

ಸಾಂಸ್ಕೃತಿಕ ಭವನ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ

Spread the love

ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರಕ್ಕೆ ಬರುವ ಅಂಬೇಡ್ಕರ್‌ ಉದ್ಯಾನದಲ್ಲಿ ಸುಸಜ್ಜಿತ ಗ್ರಂಥಾಲಯ, ಸಾಂಸ್ಕೃತಿಕ ಭವನ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐಎಎಸ್‌, ಕೆಎಎಸ್, ಐಪಿಎಸ್ ಕೋಚಿಂಗ್‌ ತರಬೇತಿ ಕೇಂದ್ರ ನಿರ್ಮಾಣಕ್ಕೆ ಶಾಸಕ ಅನಿಲ ಬೆನಕೆ ಶುಕ್ರವಾರ ಚಾಲನೆ ನೀಡಿದರು.

 

₹ 1.30 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಮಾಜದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ನೀಡಿದ ಮಾತಿನಂತೆ ನಡೆದುಕೊಂಡಿದ್ದೇನೆ. ಸುಸಜ್ಜಿತ ಡಿಜಿಟಲ್ ಗ್ರಂಥಾಲಯ, ಸಾಂಸ್ಕೃತಿಕ ಭವನ, ತರಬೇತಿ ಕೇಂದ್ರಗಳು ಗುಣಮಟ್ಟದಿಂದ ಕೂಡಿರುವಂತೆ ಗಮನ ಹರಿಸಬೇಕು’ ಎಂದರು.

ಸಾಂಸ್ಕೃತಿಕ ಭವನ ಕಾಮಗಾರಿಗೆ ಚಾಲನೆ

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಆನಂದ ಪಾಟೀಲ, ನಗರ ಸೇವಕ ಸಂದೀಪ ಜಿರಗಿಹಾಳ, ಸವಿತಾ ಕಾಂಬಳೆ, ರೂಪಾ ಚಿಕ್ಕಲದಿನ್ನಿ, ಭವನ ಸಮೀತಿ ಸದಸ್ಯರಾದ ಮಲ್ಲೇಶ ಚೌಗುಲೆ, ಮಹಾದೇವ ತಳವಾರ, ಮಂಜುನಾತ ಪಮ್ಮಾರ, ಮಹಾದೇವ ರಾಠೋಡ, ಪ್ರಸಾದ ದೇವರಮನಿ, ಪ್ರೀತಿ ಕುಕಡೆ, ಸಂತೋಷ ಕಾಂಬಳೆ, ದೀಪಕ ದಬಾಡಿಯಾ, ಯಲ್ಲಪ್ಪ ಕೋಲಕಾರ, ದುರ್ಗೇಶ ಮೈತ್ರಿ ಇತರರು ಇದ್ದರು.


Spread the love

About Laxminews 24x7

Check Also

ಶಾಲೆಗೆ ಹೋಗದ ಶಿಕ್ಷಕರು – ಅಧಿಕಾರಿಗಳ ಸನ್ಮಾನಕ್ಕೆ ದಂಡಾಗಿ ಹಾಜರಾತಿ!

Spread the love ಶಾಲೆಗೆ ಹೋಗದ ಶಿಕ್ಷಕರು – ಅಧಿಕಾರಿಗಳ ಸನ್ಮಾನಕ್ಕೆ ದಂಡಾಗಿ ಹಾಜರಾತಿ! ಅಥಣಿ, ಜುಲೈ 2:ತಾಲೂಕಿನ ಹಲವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ