Breaking News

ಈರಪ್ಪ ಢವಳೇಶ್ವರ ಹಾಗೂ ಗೆಳೆಯರು ಸೇರಿ ಪಾಳು ಬಿದ್ದ ತಂಗುದಾಣಕ್ಕೆ ಪುನೀತ್‌ ರಾಜಕುಮಾರ್‌ ತಂಗುದಾಣವಾಗಿ ಹೊಸ ರೂಪಕೊಟ್ಟಿದ್ದಾರೆ.

Spread the love

ಮೂಡಲಗಿ: ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದ ಬಳಿ ಹಾಳುಬಿದ್ದ ತಂಗುದಾಣಕ್ಕೆ ಶುಕ್ರವಾರ ಸುಣ್ಣ ಬಣ್ಣ ಬಳೆದು ಪುನೀತ್‌ ರಾಜಕುಮಾರ್‌ ತಂಗುದಾಣವಾಗಿ ರೂಪಾಂತರಗೊಂಡು ಎಲ್ಲರ ಕಣ್ಮನ ಸೆಳೆಯಿತು.

ಇಲ್ಲಿಯ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಹಾಗೂ ಗೆಳೆಯರು ಸೇರಿ ಪಾಳು ಬಿದ್ದ ತಂಗುದಾಣಕ್ಕೆ ಹೊಸ ರೂಪಕೊಟ್ಟಿದ್ದಾರೆ.

ಪುನೀತ್‌ ರಾಜಕುಮಾರ್‌ ಜನ್ಮದಿನದ ಅಂಗವಾಗಿ ಶುಕ್ರವಾರ ನೂರಾರು ಅಭಿಮಾನಗಳೊಂದಿಗೆ ತಂಗುದಾಣದಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ತಂಗುದಾಣವ್ನು ಕನ್ನಡ ಧ್ವಜಗಳು, ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು. ಶಾಲಾ ಮಕ್ಕಳು ನಾಡಿಗೀತೆ ಹೇಳಿದರು.

‘ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿರುವ ತಂಗುದಾಣವು ನಿರುಪಯುಕ್ತವಾಗಿತ್ತು. ಜನರಿಗೆ ಅನುಕೂಲ ಆಗಲೆಂದು ನವೀಕರಣ ಮಾಡಿದ್ದೇವಿ’ ಎಂದು ಈರಪ್ಪ ಢವಳೇಶ್ವರ ಹೇಳಿದರು.

ಯುವ ಕಲಾವಿದ ಓಂ ಸಂತಾ ಅವರು ಪುನಿತ್‌ ರಾಜಕುಮಾರ್‌ ಅವರ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾದಿಕಾರಿ ಅಜಿತ್ ಮನ್ನಿಕೇರಿ, ಪುಸರಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ, ಗಾಯಕ ಮಂಜುನಾಥ ಹುಡೆದ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಶಿವು ಚಂಡಕಿ, ಶಿವು ಸಣ್ಣಕ್ಕಿ, ಈರಣ್ಣ ಕೊಣ್ಣೂರ ಇದ್ದರು.


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ