Breaking News

ಕೆಕೆ ಕೊಪ್ಪ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಬೈಕ್ ಸವಾರನನ್ನು ಬಲಿತೆಗೆದುಕೊಂಡಿದೆ.

Spread the love

ಬೆಳಗಾವಿ: ಇಲ್ಲಿನ ಕೆಕೆ ಕೊಪ್ಪ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಬೈಕ್ ಸವಾರನನ್ನು ಬಲಿತೆಗೆದುಕೊಂಡಿದೆ.

ಸುಳೇಬಾವಿ ಗ್ರಾಮದ ರಾಮು ನಾರಾಯಣ ಬಂಗೋಡಿ (54) ಮೃತಪಟ್ಟವರು. ಅವರು ವಡಗಾವಿ ದೇವಾಂಗನಗರ ನಿವಾಸಿ, ಗೋಪಾಲ ಬಸಪ್ಪ ತಾಳೂಕರ (58) ಅವರೊಂದಿಗೆ ಬುಧವಾರ ಮಧ್ಯಾಹ್ನ ಹಿರೇಬಾಗೇವಾಡಿಯಿಂದ ಬೈಕ್ ನಲ್ಲಿ ಬರುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ವಾಹನ ಗುದ್ದಿದೆ.

ಗೋಪಾಲ ತಾಳೂಕರ ಅವರಿಗೆ ಗಾಯಗಳಾಗಿದ್ದು ತಲೆ ಹಾಗೂ ಮುಖಕ್ಕೆ ತೀವ್ರ ಏಟು ತಗುಲಿದ ರಾಮು ಬಂಗೋಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತಪಡಿಸಿದ ವಾಹನದವನು ನಿಲ್ಲಿಸದೆ ಪರಾರಿಯಾಗಿದ್ದಾನೆ.

ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಮಹಾಜನ ವರದಿಯೇ ಅಂತಿಮ ಎಂದು ನಿರ್ಣಯ ಕೈಗೊಳ್ಳಲು ಕನ್ನಡಪರ ಸಂಘಟನೆಗಳ ಒತ್ತಾಯ

Spread the loveಬೆಳಗಾವಿ: ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ. ಮಹಾಜನ ವರದಿಯೇ ಅಂತಿಮ ಎಂದು ಐತಿಹಾಸಿಕ ನಿರ್ಣಯ ಕೈಗೊಳ್ಳಲು ಬೆಳಗಾವಿ ಮಹಾನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ