ಹುಬ್ಬಳ್ಳಿ: ಮಹಾರಾಷ್ಟ್ರದವರು ಗಡಿ ಭಾಗದ ರಾಜ್ಯಕ್ಕೆ ಸುಮಾರು 865 ಗ್ರಾಮಗಳಲ್ಲಿ ಆರೋಗ್ಯ ವಿಮೆ ಜಾರಿ ಘೋಷಣೆ ಮಾಡಿದ್ದು, ಇದು ಒಕ್ಕೂಟ ವ್ಯವಸ್ಥೆ ಗೆ ಧಕ್ಕೆಯಾಗಿದ್ದು,ಕೇಂದ್ರ ಸರಕಾರ ತಕ್ಷಣ ಮಧ್ಯ ಪ್ರವೇಶಿಸಬೇಕು. ವಿಚಾರ ಬಗ್ಗೆ ಮೌನ ತಾಳಿರುವ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಏಕನಾಥ ಶಿಂಧೆ ಸರಕಾರದ ಹಿರಿಯ ನಾಯಕರೊಬ್ಬರು 865 ವಿವಾದಾತ್ಮಕ ಗಡಿ ಹಳ್ಳಿಗಳಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಆರೋಗ್ಯ ವಿಮಾ ಯೋಜನೆ ಜಾರಿಗೋಳಿಸುವುದಾಗಿ ಘೋಷಣೆ ಮಾಡಿದ್ದು, ಮಹಾಜನ ವರದಿ ಅಂತಿಮ ಎಂದು ನಾವು ಒಪ್ಪಿಕೊಂಡಾಗಿದೆ.ಆದರೆ ಮಹಾರಾಷ್ಟ್ರ ದ ನಡೆ ಒಕ್ಕೂಟ ವ್ಯವಸ್ಥೆ ಗೆ ಧಕ್ಕೆ ತರುವುದಾಗಿದೆ ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮೌನವಾಗಿರುವುದು ದುರ್ದೈವದ ಸಂಗತಿ ಎಂದರು.
ರಾಜ್ಯ, ಕನ್ನಡಿಗರ ಹಿತ ಕಾಯುವಲ್ಲಿ ಸಿಎಂ ವಿಫಲರಾಗಿದ್ದು, ಸಿಎಂ ಹುದ್ದೆಯಲ್ಲಿ ಮುಂದುವರೆಯವ ನೈತಿಕತೆ ಇಲ್ಲ ಎಂದರು ಕೂಡಲೇ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಮಹಾರಾಷ್ಟ್ರ ಸರಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ನಮ್ಮ ಸರಕಾರ ಇದ್ದಾಗ ಬಡವರು, ಕಾರ್ಮಿಕರು, ವಿದ್ಯಾರ್ಥಿ ಗಳಿಗೆ ಅನುಕೂಲವಾಗಲು ಇಂದಿರಾ ಕ್ಯಾಂಟಿನ್ ಆರಂಭಿಸಿದ್ದೇವು ರಾಜ್ಯದಲ್ಲಿ ಸುಮಾರು 400 ಕ್ಯಾಂಟಿನ್ ಗಳನ್ನು ಬಿಜೆಪಿ ಸರಕಾರ ಮುಚ್ಚುವಂತೆ ಮಾಡಿರುವುದು ಬಡವರು, ವಿದ್ಯಾರ್ಥಿಗಳಿಗೆ ದ್ರೋಹ ಬಗೆದಿದೆ ಎಂದರು.
ಕಾಂಗ್ರೆಸ್ ಸರಕಾರ ಆರಂಭಿಸಿದ್ದ ಯೋಜನೆಯನ್ನು ಪ್ರಧಾನಿಯವರು ತಮ್ಮ ಸರಕಾರದ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ಬೆಂಗಳೂರು-ಮೈಸೂರು ಹೈವೇ, ಧಾರವಾಡದ ಐಐಟಿ ಇತ್ಯಾದಿ ನಮ್ಮ ಸರಕಾರ ಯೋಜನೆಗಳು ಎಂದರು.
ಪ್ರವಾಹ, ಕೋವಿಡ್ ಸಂಕಷ್ಟಕ್ಕೆ ಬಾರದ ನೆರವಾಗದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರು ಅಧಿಕಾರದಾಸೆಗೆ ವಾರಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ ಟೀಕಿಸಿದರು.
ರಾಜ್ಯದಲ್ಲಿರುವುದು ಭ್ರಷ್ಟ ಮತ್ತು ಲೂಟಿ ಸರಕಾರವಾರಚಾಗಿದೆ ಎಂಬುದಕ್ಕೆ ಕಣ್ಣೇದುರೆ ಹಲವಾರು ಪ್ರಕರಣಗಳಿವೆ. ಬಿಜೆಪಿ ಶಾಸಕರೆ ಭ್ರಷ್ಟಾಚಾರ ದ ಬಗ್ಗೆ ಮಾತನಾಡಿದ್ದಾರೆ ಕೆಲವರು ಸಿಕ್ಕು ಬಿದ್ದಿದ್ದಾರೆ ಸಿಎಂಗೆ ಇನ್ಬೇನು ದಾಖಲೆ ಬೇಕು. ಒಬ್ಬರು ಇಬ್ಬರು ಶಾಸಕರ ಮನೆ ಮೇಲೆ ವಾಣಿಜ್ಯ, ಆದಾಯ ತೆರಿಗೆ ದಾಳಿ ಮಾಡಿ ಕಣ್ಣೋರೆಸುವ ತಂತ್ರ ಬೇಡ. ಸಿಎಂ, ಸಚಿವರುಗಳ ಮನೆ ಮೇಲೆ ದಾಳಿ ಮಾಡಲಿ ಎಂದರು
ಕಾಂಗ್ರೆಸ್ ನೀಡಿದ ಮೂರು ಭರವಸೆ ಅಧಿಕಾರಕ್ಕೆ ಬಂದ ನಂತರ ಈಡೇರಿಸಲು ಸಾಧ್ಯವಾಗದಿದ್ದರೆ ಕ್ಷಣವೂ ಅಧಿಕಾರದಲ್ಲಿರುವುದಿಲ್ಲ