Breaking News

ಸಿಎಂ ಇಬ್ರಾಹಿಂ ಮೇಲೆ ಕುಮಾರಸ್ವಾಮಿ ಗರಂ!

Spread the love

ಹಾಸನ,ಮಾರ್ಚ್‌14: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ. ಇತ್ತ ತಮ್ಮ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ರಾಜಕೀಯ ನಾಯಕರು ಪಕ್ಷಾಂತರ ಪರ್ವ ಶುರು ಮಾಡಿದ್ದು, ಈಗಾಗಲೇ ಕಾಂಗ್ರೆಸ್‌ ನತ್ತ ಮುಖ ಮಾಡಿರುವ ಗುಬ್ಬಿ ಶ್ರಿನಿವಾಸರನ್ನ ಮತ್ತೆ ಜೆಡಿಎಸ್‌ ಗೆ ಕರೆತರುವ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ.

 

ಗುಬ್ಬಿ ಕ್ಷೇತ್ರದ ಶ್ರೀನಿವಾಸ ಗೌಡ ಅವರು ಜೆಡಿಎಸ್‌ಗೆ ಬಂದ್ರೆ ಸ್ವಾಗತ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದು, ಈ ಹೇಳಿಕೆ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.

ಗುಬ್ಬಿ ಕ್ಷೇತ್ರದ ಶ್ರೀನಿವಾಸ ಅವರನ್ನು ಜೆಡಿಎಸ್‌ಗೆ ವಾಪಸ್ ಕರೆತರುವ ವಿಚಾರದಲ್ಲಿ ತಪ್ಪು ಹೇಳಿಕೆ ಕೊಟ್ಟಿದ್ದಾರೆ. ಅಭ್ಯರ್ಥಿ ವಿಚಾರದಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು. ಆಕಸ್ಮಾತ್ ಸಿಎಂ ಇಬ್ರಾಹಿಂ ಹೇಳಿಕೆ ಕೊಟ್ಟಿದ್ದರೆ ಅದು ತಪ್ಪು ಇದರಿಂದ ಕಾರ್ಯಕರ್ತರು ಗೊಂದಲಕ್ಕಿಡಾಗುತ್ತಾರೆ. ನನ್ನ ಗಮನಕ್ಕೆ ಬಾರದೆ ಯಾರು ಯಾವುದೇ ಹೇಳಿಕೆಯನ್ನು ಕೊಡಬಾರದು ಅದೇನಾದ್ರು ಕೊಟ್ಟಿದ್ರೆ ಅದು ತಪ್ಪು ಹೇಳಿಕೆ ನಾನು ಅಭ್ಯರ್ಥಿ ಘೋಷಣೆ ಮಾಡುವ ಅಧಿಕಾರವನ್ನು ಯಾರಿಗೂ ಕೊಟ್ಟಿಲ್ಲ ಎಂದು ಸಿಎಂ ಇಬ್ರಾಹಿಂ ವಿರುದ್ದ ಕಿಡಿಕಾರಿದ್ದಾರೆ.

ಕಳೆದ ಒಂದು ವರ್ಷದಿಂದ ನಾಗರಾಜ್ ಎಂಬ ಅಭ್ಯರ್ಥಿ ಕೆಲಸ ಮಾಡ್ತಿದ್ದಾರೆ. ಹೇಳಿಕೆ ನೀಡುವಾಗ ಯೋಚಿಸಿ ಹೇಳಿಕೆ ಕೊಡಬೇಕು ಇಂತಹ ವಿಚಾರದಲ್ಲಿ ಹುಡುಗಾಟ ಆಡಬಾರದು ಎಂದು ಬಹಳ ಖಾರವಾಗಿ ಹೇಳಿದ್ದಾರೆ. ಕಾರ್ಯಕರ್ತರ ಪರವಾಗಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಗುಬ್ಬಿ ಕ್ಷೇತ್ರದಲ್ಲಿ ಈಗಾಗಲೇ ಅಭ್ಯರ್ಥಿಯು ಘೋಷಣೆ ಆಗಿದೆ. ಪಕ್ಷಕ್ಕೆ ಬಾರಪ್ಪ ಅಂತ ಯಾರು ಅರ್ಜಿ ಯಾಕೆ ಆತನನ್ನು ಕರೆದಿಲ್ಲ. ಹಾಗಾಗಿ ಇಂಥ ಹೇಳಿಕೆ ಕೊಡುವಾಗ ಯೋಚನೆ ಮಾಡಿ ಕೊಡಬೇಕು ಎಂದು ರಾಜ್ಯಾಧ್ಯಕ್ಷರ ವಿರುದ್ಧವೇ ಕೆಂಡಾಮಂಡಲವಾದರು.

ಇನ್ನು, ಹಾಸನ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ ಕಾರ್ಯಕರ್ತರ ಆಶಯದಂತೆಯೇ ಅಭ್ಯರ್ಥಿ ಪ್ರಕಟವಾಗುತ್ತದೆ. ಕೆಲವೊಂದು ಅನುಕಂಪದ ಆಧಾರದ ಮೇಲೆ ಗೆಲುವು ಪಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಸನ ಟಿಕೆಟ್‌ ಬಗ್ಗೆ ಎಲ್ಲವನ್ನೂ ದೇವೇಗೌಡರು ತೀರ್ಮಾನ ಮಾಡುತ್ತಾರೆ. ಹಾಸನದ ರಾಜಕೀಯ ನನಗಿಂತ ದೇವೇಗೌಡರಿಗೆ ಗೊತ್ತಿದೆ. ಅಂತಿಮವಾಗಿ ದೇವೇಗೌಡರು ಹಾಸನ ಕ್ಷೇತ್ರದ ಟಿಕೆಟ್‌ ಘೋಷಣೆ ಮಾಡುತ್ತಾರೆ ಎಂದರು.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ