Breaking News

ಮಾರ್ವಲಸ್ ಬೆಳಗಾಂ ಅಡ್ಮಿನ್ ರಾಖೇಶ್ ನಂದಗಡಕರ್&ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವಿಶಾಲ ಕಂಟ್ರಿ ಸೈಡ್ ಹೊಟೆಲ್ ಸಿಬ್ಬಂದಿ

Spread the love

ಬೆಳಗಾವಿ: ಊಟ ಮಾಡಲು ಹೋದ ತಮ್ಮ ತಂಡದ ಮೇಲೆ ಹೊಟೆಲ್ ಸಿಬ್ಬಂದಿ ತೀವ್ರತರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಬೆಳಗಾವಿಯ ಸೋಶಿಯಲ್ ಮೀಡಿಯಾ ಮಾರ್ವಲಸ್ ಬೆಳಗಾಂ ಅಡ್ಮಿನ್ ರಾಖೇಶ್ ನಂದಗಡಕರ್ ಪೊಲೀಸ್ ದೂರು ದಾಖಲಿಸಿದ್ದಾರೆ.

ಸುಳಗಾದ ವಿಶಾಲ ಕಂಟ್ರಿ ಸೈಡ್ ಎನ್ನುವ ಹೊಟೆಲ್ ಗೆ ಮಾರ್ಚ್ 9ರ ರಾತ್ರಿ ತಾವು ಸುಮಾರು 25 ಜನರು ಊಟಕ್ಕೆ ತೆರಳಿದ್ದಾಗಿಯೂ, ಆ ವೇಳೆ ಅಲ್ಲಿನ ಸಿಬ್ಬಂದಿ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಲ್ಲದೆ, ಜಗಳ ಮಾಡಿ ಹೊಟೆಲ್ ಪಾತ್ರೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ರಾಕೇಶ್ ದೂರಿದ್ದಾರೆ.

ತಮ್ಮ ಜೊತೆ ತೆರಳಿದ್ದ ಮಹಿಳೆಯರಿಗೂ ಅವ್ಯಾವಾಗಿ ನಿಂದಿಸಿದ್ದಲ್ಲದೆ, ಅಪ್ರಚೋದಿತವಾಗಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ತಮ್ಮ ತಂಡದ ಸದಸ್ಯರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಅವರೆಲ್ಲ ಉತ್ತರ ಭಾರತದಿಂದ ಬಂದಿರುವ ಸಿಬ್ಬಂದಿಯಾಗಿದ್ದು, ಅತ್ಯಂತ ಕೆಟ್ಟದ್ದಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಕುರಿತ ವೀಡಿಯೋವನ್ನು ಸಹ ಅವರು ಬಿಡುಗಡೆ ಮಾಡಿದ್ದಾರೆ.


Spread the love

About Laxminews 24x7

Check Also

ಚುನಾವಣೆ ಎದುರಿಸಲು ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸಬೇಕು

Spread the loveಬೆಳಗಾವಿ: ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಚುನಾವಣೆ ಎದುರಿಸಲು ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸಬೇಕು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ