ಬಾಲಿವುಡ್ ತಾರೆಯರು ತಮ್ಮ ಮನೆಗಳು, ಜಿಮ್, ರೆಸ್ಟೋರೆಂಟ್ ಇಲ್ಲವೇ ಕ್ಲಬ್‌ಗೆ ಹೋದ್ರೂ ಅವರನ್ನು ಪಾಪರಾಜಿಗಳು ಬೆಂಬಿಡದೆ ಹಿಂಬಾಲಿಸುತ್ತಿರುತ್ತಾರೆ.
‘ಪಾಪ್ ಸಂಸ್ಕೃತಿ’ ಇತ್ತೀಚೆಗೆ ಸ್ವಲ್ಪ ಹೆಚ್ಚಾಗಿದೆ ಅಂತ ಹೇಳಬಹುದು, ಅದರಲ್ಲೂ ವಿಶೇಷವಾಗಿ ಎರಡು ವಾರಗಳ ಹಿಂದೆ ಅಲಿಯಾ ಭಟ್ ಅವರ ಪಕ್ಕದ ಕಟ್ಟಡದ ಟೆರೇಸ್‌ನಿಂದ ಇಬ್ಬರು ಫೋಟೋಗ್ರಾಫರ್‌ಗಳು ಅವರ ಫೋಟೋಗಳನ್ನು ಕ್ಲಿಕ್ ಮಾಡಿದ ಘಟನೆಯ ನಡೆದಿದ್ದು ಎಲ್ಲರಿಗೂ ಗೊತ್ತಿದೆ.
ಇನ್ನು ಇದೇ ರೀತಿ ಗುರುವಾರ ರಾತ್ರಿ,ಸೈಫ್ ಅಲಿ ಖಾನ್ಕೂಡ ಪಾಪರಾಜಿಗಳ ಮೇಲೆ ಗರಂ ಆಗಿದ್ದರು.
ಕಳೆದ ರಾತ್ರಿ ಸೈಪ್, ಕರೀನಾ ದಂಪತಿಗಳು ಪಾರ್ಟಿಯಿಂದ ಹಿಂತಿರುಗುತ್ತಿದ್ದಾಗ ಪಾಪರಾಜಿಗಳು ಸಹ ಅವರನ್ನು ಹಿಂಬಾಲಿಸಿದ್ದರು.
ಕರೀನಾ ಕಪೂರ್ ಖಾನ್ ಮತ್ತು ಅವರನ್ನು ಅವರ ಮನೆಯವರೆಗೂ ಹಿಂಬಾಲಿಸಿದ ಪಾಪರಾಜಿಗಳ ಕಂಡು ಗುಡುಗಿದರು. ಈ ವೇಳೆ ಸೈಫ್ ಅಲಿ ಖಾನ್ ಕಪ್ಪು ಕುರ್ತಾ ಧರಿಸಿದ್ದರು.