Breaking News

ಪ್ರಹ್ಲಾದ್ ಜೋಶಿ ದಳಪತಿಗಳಿಗೆ ವ್ಯಂಗ್ಯವಾಡಿದ್ದು, ಮನೆಯನ್ನೇ ನಿರ್ವಹಣೆ ಮಾಡಲು ಆಗದವರು ರಾಜ್ಯವನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂದರು

Spread the love

ಹುಬ್ಬಳ್ಳಿ: ಹಾಸನ ಕ್ಷೇತ್ರದ ಟಿಕೆಟ್ ಕಿತ್ತಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದಳಪತಿಗಳಿಗೆ ವ್ಯಂಗ್ಯವಾಡಿದ್ದು, ಮನೆಯನ್ನೇ ನಿರ್ವಹಣೆ ಮಾಡಲು ಆಗದವರು ರಾಜ್ಯವನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರು ಮೊದಲು ಮನೆ ಸರಿ ಮಾಡಿಕೊಳ್ಳಲಿ ಅನಂತರ ರಾಜ್ಯ ಆಳೋಕೆ ಬರಲಿ ಎಂದು ಹೇಳಿದ್ದಾರೆ.

ದಳಪತಿಗಳಿಗೆ ಮನೆಯವರೆಲ್ಲ ಎಲೆಕ್ಷನ್ ಗೆ ನಿಂತರೂ ಸಮಾಧಾನವಾಗಿಲ್ಲ. ಕುಟುಂಬದಲ್ಲಿ 12 ಜನವಿದ್ದರೂ 12 ಜನ ಚುನಾವಣೆಗೆ ನಿಲ್ಲುತ್ತಿದ್ದಾರೆ. ಮನೆಯಲ್ಲಿಯೇ ಈಗ ಟಿಕೆಟ್ ಗಾಗಿ ಬಡಿದಾಟ ಆರಂಭವಾಗಿದೆ. ಕುಟುಂಬದ ಸಮಸ್ಯೆಯನ್ನೇ ಬಗೆಹರಿಸಲಾಗದವರು ರಾಜ್ಯವನ್ನು, ಜನರ ಸಮಸ್ಯೆಯನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂದು ಕೇಳಿದ್ದಾರೆ.

ಕೆಲ ರಾಷ್ಟ್ರಗಳಲ್ಲಿ ಒಂದೇ ಜಾತಿಯಿದ್ದರೂ ಜಾತಿ ಜಾತಿಗಳ ನಡುವೆಯೇ ಹೊಡೆದಾಟಗಳು ಆಗುತ್ತವೆ. ಅದೇ ರೀತಿ ಒಂದೇ ಕುಟುಂಬದವರಾದರೂ ಟಿಕೆಟ್ ಗಾಗಿ ಬಡಿದಾಡಿಕೊಳ್ಳುತ್ತಿದ್ದಾರೆ. ಮೊದಲು ಮನೆ ನಿರ್ವಹಣೆ ಮಾಡಲಿ ಎಂದು ಟಾಂಗ್ ನೀಡಿದ್ದಾರೆ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ