Breaking News

ರಾಜ್ಯದಿಂದ 102 ಎಐಸಿಸಿ ಸದಸ್ಯರ ಪಟ್ಟಿ ಬಿಡುಗಡೆ

Spread the love

ಬೆಂಗಳೂರು: ರಾಜ್ಯದಿಂದ 102 ಮಂದಿ ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್‌ ಕಮಿಟಿ) ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಕಾಂಗ್ರೆಸ್‌ ಶಿಫಾರಸು ಮಾಡಿದ್ದ 150 ಮಂದಿಯ ಪಟ್ಟಿಯಲ್ಲಿ 102 ಮಂದಿಗೆ ಮಾತ್ರ ಮನ್ನಣೆ ನೀಡಿದೆ.

ಕೆಲವು ಹೆಸರುಗಳು ದಿಲ್ಲಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಪಕ್ಷದೊಳಗೆ ಅಸಮಾಧಾನದ ಹೊಗೆ ಕಾಣುತ್ತಿದೆ.

ಎಐಸಿಸಿ ಅಧಿವೇಶನವು ಇದೇ 24ರಿಂದ ಛತ್ತೀಸ್‌ಗಢದ ರಾಯಪುರದಲ್ಲಿ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ನಡೆಯತ್ತಿರುವ ಮೊದಲ ಅಧಿವೇಶನ ಇದು. ಖರ್ಗೆ ಅವರನ್ನು ಕೂಡ ಕರ್ನಾಟಕದಿಂದಲೇ ಎಐಸಿಸಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ಇದರಲ್ಲಿ ಬಹುತೇಕರು ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಕೆಪಿಸಿಸಿ ಮಾಜಿ ಅಧ್ಯಕ್ಷರು, ರಾಜ್ಯಸಭಾ ಸದಸ್ಯರು, ಸಂಸದರು, ಪಕ್ಷದ ಹಿರಿಯ ನಾಯಕರು, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಇದ್ದಾರೆ. ಕೆಪಿಸಿಸಿ ಶಿಫಾರಸು ಮಾಡಿದ್ದ 150 ಮಂದಿಯ ಪಟ್ಟಿಯಲ್ಲಿ ಹಲವರಿಗೆ ಕೊಕ್‌ ನೀಡಲಾಗಿದೆ.

ಎಐಸಿಸಿ ಸದಸ್ಯರ ಪಟ್ಟಿ ಈ ಕೆಳಕಂಡಂತಿದೆ.
ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌, ಜೈರಾಮ್‌ ರಮೇಶ್‌, ಎಲ್‌.ಹನುಮಂತಯ್ಯ, ಡಿ.ಕೆ.ಸುರೇಶ್‌, ಸೈಯದ್‌ ನಾಸೀರ್‌ ಹುಸೇನ್‌, ಜಿ.ಸಿ.ಚಂದ್ರಶೇಖರ್‌, ಎಂ.ಬಿ.ಪಾಟೀಲ್‌, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್‌, ಈಶ್ವರ ಖಂಡ್ರೆ, ಸತೀಶ್‌ ಜಾರಕಿಹೊಳಿ, ಆರ್‌.ಧ್ರುವನಾರಾಯಣ, ಡಾ.ಜಿ.ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಆರ್‌.ವಿ.ದೇಶಪಾಂಡೆ, ಅಲ್ಲಂ ವೀರಭದ್ರಪ್ಪ, ಕೆ.ಎಚ್‌.ಮುನಿಯಪ್ಪ, ಎಚ್‌.ಕೆ.ಪಾಟೀಲ್‌, ವೀರಪ್ಪ ಮೊಯ್ಲಿ, ಕೆ.ರೆಹಮಾನ್‌ ಖಾನ್‌, ಎನ್‌.ಎಸ್‌.ಬೋಸರಾಜು, ಬಿ.ಎಂ. ಸಂದೀಪ್‌ ಕುಮಾರ್‌, ಯು.ಟಿ.ಖಾದರ್‌, ಡಾ.ಅಜಯ್‌ ಸಿಂಗ್‌, ಕೆ.ಜೆ.ಜಾರ್ಜ್‌, ರಮೇಶಕುಮಾರ್‌, ಕೃಷ್ಣಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಎಚ್‌.ಎಂ.ರೇವಣ್ಣ, ಎಸ್‌.ಆರ್‌.ಪಾಟೀಲ್‌, ಡಾ.ಬಿ.ಎಲ್‌.ಶಂಕರ್‌.

ಸಿ.ಎಸ್‌.ನಾಡಗೌಡ, ಎಸ್‌.ಎಸ್‌.ಮಲ್ಲಿಕಾರ್ಜುನ, ಪಿ.ಎಂ.ನರೇಂದ್ರಸ್ವಾಮಿ, ಮೋಟಮ್ಮ, ವಿನಯಕುಮಾರ್‌ ಸೊರಕೆ, ಲಕ್ಷ್ಮೀಹೆಬ್ಟಾಳಕರ್‌, ಡಾ.ಅಂಜಲಿ ನಿಂಬಾಳ್ಕರ್‌, ಕೆ.ಎನ್‌.ರಾಜಣ್ಣ, ವಿ.ಎಸ್‌.ಉಗ್ರಪ್ಪ, ಪ್ರೊ|ರಾಜೀವ್‌ಗೌಡ, ಶಿವಾನಂದ ಪಾಟೀಲ್‌, ರಾಜಶೇಖರ ಪಾಟೀಲ್‌, ಪಿ.ಟಿ.ಪರಮೇಶ್ವರ ನಾಯಕ್‌, ರಮಾನಾಥ ರೈ, ಎನ್‌.ಎ.ಹ್ಯಾರಿಸ್‌, ರೂಪ ಶಶಿಧರ್‌, ಯತೀಂದ್ರ, ಕೆ.ತನ್ವೀರ್‌ ಸೇs., ಯಶವಂತಗೌಡ ಪಾಟೀಲ್‌.

ಐವಾನ್‌ ಡಿಸೋಜ, ವಿನಯ ಕಾರ್ತಿಕ, ಬಿ.ವಿ.ಶ್ರೀನಿವಾಸ, ಮಾರ್ಗರೇಟ್‌ ಆಳ್ವ, ಚಲುವರಾಯಸ್ವಾಮಿ, ಜಮೀರ್‌ ಅಹ್ಮದ್‌, ರಕ್ಷಾ ರಾಮಯ್ಯ, ನಾಗಲಕ್ಷ್ಮೀಚೌಧರಿ, ಶಿವರಾಜ ತಂಗಡಗಿ, ಶರಣ ಪ್ರಕಾಶ್‌ ಪಾಟೀಲ್‌, ಮಂಜುನಾಥ ಭಂಡಾರಿ, ನಜೀರ್‌ ಅಹ್ಮದ್‌, ಎಚ್‌.ಸಿ.ಮಹದೇವಪ್ಪ, ಬಿ.ಶಿವರಾಂ, ಎಂ.ಕೃಷ್ಣಪ್ಪ,, ರಾಜಾ ವೆಂಕಟಪ್ಪ ನಾಯಕ, ಪುಂಡಲೀಕರಾವ್‌ ಶೆಟ್ಟಿಬಾ, ಯು.ಬಿ.ವೆಂಕಟೇಶ್‌, ವಿಜಯ ಮುಳಗುಂದ್‌, ಗೋವಿಂದರಾಜ್‌, ಬಸವರಾಜ ರಾಯರೆಡ್ಡಿ, ವಿ.ಆರ್‌.ಸುದರ್ಶನ್‌, ಪ್ರಕಾಶ್‌ ಹುಕ್ಕೇರಿ, ಪಿ.ಅಶೋಕ, ಉಮಾಶ್ರೀ, ಬಿ.ಎನ್‌.ಚಂದ್ರಪ್ಪ, ಶಿವಶಂಕರ ರೆಡ್ಡಿ, ಎಸ್‌.ಈ. ಸುಧೀಂದ್ರ, ಪ್ಯಾರಿಜಾನ್‌ ಮೊಹ್ಮದ್‌ ನಲಪಾಡ್‌ ಹ್ಯಾರಿಸ್‌, ಡಾ.ಪುಷ್ಪಾ ಅಮರ್‌ನಾಥ್‌, ಕೀರ್ತಿಗಣೇಶ್‌, ರಾಮಚಂದ್ರ, ರಿಜ್ವಾನ್‌ ಅರ್ಷದ್‌, ಪ್ರೊ.ಐ.ಜಿ.ಸನದಿ, ಜಿ.ಪದ್ಮಾವತಿ, ಎಂ.ಸಿ.ವೇಣುಗೋಪಾಲ್‌, ಪಿ.ವಿ.ಮೋಹನ್‌, ಎಂ.ನಾರಾಯಣಸ್ವಾಮಿ, ವಿ.ಎಸ್‌.ಆರಾಧ್ಯ, ಸೂರಜ್‌ ಹೆಗ್ಡೆ, ಐಶ್ವರ್ಯ ಮಹದೇವ್‌, ಮಧು ಬಂಗಾರಪ್ಪ, ರಘುನಂದನ್‌ ರಾಮಣ್ಣ, ಆರ್‌.ಬಿ.ತಿಮ್ಮಾಪುರ, ಸಂಪತ್‌ ರಾಜ್‌, ಪ್ರಕಾಶ್‌ ರಾಥೋಡ್‌, ಸುನಿಲ್‌ ಕನಗೋಲು ಹಾಗೂ ಶರಣಬಸಪ್ಪ ದರ್ಶನಾಪುರ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ