ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 22ನೇ ವಾರ್ಷಿಕ ಘಟಿಕೋತ್ಸವವನ್ನು ಶುಕ್ರವಾರ, ದಿನಾಂಕ 24ನೇ ಫೆಬ್ರವರಿ, 2023 ರಂದು ಪೂರ್ವಾಹ್ನ 11:30ಕ್ಕೆ ವಿ. ತಾ. ವಿ. ಜ್ಞಾನ ಸಂಗಮ ಆವರಣದ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಿದೆ.
ಶ್ರೀ. ಥಾವರಚಂದ್ ಗೆಹ್ಲೋಟ್, ಗೌರವಾನ್ವಿತ ರಾಜ್ಯಪಾಲರು, ಕರ್ನಾಟಕ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಅಧ್ಯಕ್ಷತೆ ವಹಿಸುವರು
ಡಾ. ಸಿ. ಎನ್. ಅಶ್ವಥ್ ನಾರಾಯಣ್, ಮಾನ್ಯ ಸಚಿವರು, ಉನ್ನತ ಶಿಕ್ಷಣ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಸಮಕುಲಾಧಿಪತಿಗಳು ಉಪಸ್ಥಿತರಿರುವರು.
ಪ್ರೋ. ಟಿ. ಜಿ. ಸೀತಾರಾಮ್, ಮಾನ್ಯ ಅಧ್ಯಕ್ಷರು, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ), ನವದೆಹಲಿ ಇವರು ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡುವರು.
ಈ ಸಂದರ್ಭದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ತ್ಯುನ್ನತ ಸೇವೆ ಸಲ್ಲಿಸಿದ ಮೂವರ ಮಹನೀಯರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರಧಾನ ಮಾಡಲಾಗುವುದು. ಟೊಯೊಟಾ ಕಿರ್ಲೋಸ್ಕರ್ ಮೋಟರ್ಸ್ ಚೇರ್ಮನ್ ವಿಕ್ರಮ್ ಕಿರ್ಲೋಸ್ಕರ್, ವೆಬ್ ಕೋ ಇಂಡಿಯಾ ಪ್ರೈ.ಲಿ ಹಾಗೂ ಟಿವಿಎಸ್ ಚೇರ್ಮನ್ ಲಕ್ಷ್ಮಿ ನಾರಾಯಣ, ಬೆಳಗಾವಿ ಫೆರೊಕಾಸ್ಟ್ ಇಂಡಿಯಾ ಪ್ರೈ.ಲಿ ಚೇರ್ಮನ್ ಸಚಿನ್ ಬಿ ಸಬ್ನಿಸ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ.
ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಿಜಿ ಡಿಪ್ಲೋಮಾ ಪದವಿಗಳನ್ನು ಪ್ರಧಾನ ಮಾಡಲಾಗುತ್ತದೆ. ಯಶಸ್ವಿಯಾಗಿ ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ ಪಿ.ಎಚ್‌ಡಿ,ಎಂ.ಎಸ್ಸಿ.(ಇಂಜಿನಿಯರಿಂಗ್) ಬೈ ರಿಸರ್ಚ ಮತ್ತು ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಪದವಿಗಳನ್ನು ಪ್ರಧಾನ ಮಾಡಲಾಗುತ್ತದೆ.
ಘಟಿಕೋತ್ಸವಕ್ಕೆ ಆಗಮಿಸಿದ ವಿದ್ಯಾರ್ಥಿಗಳು, ಪಾಲಕರು ಹಾಗೂ ಆಹ್ವಾನಿತರಿಗೆ ಶುಕ್ರವಾರ, ದಿನಾಂಕ 24 ನೇ ಫೆಬ್ರವರಿ 2023ರಂದು ಕೇಂದ್ರ ಬಸ್ ನಿಲ್ದಾಣ, ಬೆಳಗಾವಿಯಿಂದ ಬೆಳಗ್ಗೆ7 ರಿಂದ 8:30 ಘಂಟೆಯವರೆಗೆ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.