ಗೋಕಾಕ: ಗೋಕಾಕದ ಉದ್ಯಮಿ ರಾಜು ಝಂವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಇಬ್ಬರುನ್ನು ಬಂಧಿಸಲಾಗಿದೆ, ಬಂಧಿತರ ಸಂಖ್ಯೆ 5ಕ್ಕೇರಿದೆ.
ಗೋಕಾಕ ಮೋಮಿನ್ ಗಲ್ಲಿಯ ವೆಲ್ಡಿಂಗ್ ವರ್ಕ ಮಾಡುವ 24 ವರ್ಷದ ಮೋಯಿನ್ ಪಟೇಲ್ ಮತ್ತು ಲಕ್ಕಡ ಗಲ್ಲಿಯ ಟೈಲ್ಸ್ ಕೆಲಸ ಮಾಡುವ 21 ವರ್ಷದ ಅಬುತಾಲ್ ಮೊಹ್ಮದ್ ಹನೀಫ್ ಮುಲ್ಲಾ ಬಂಧಿತರು. ಇವರಿಬ್ಬರೂ ಈಗಾಗಲೆ ಬಂಧಿತರಾಗಿರುವ ಶಫತ್ ಟ್ರಾಸ್ಗರ್ ನ ಗೆಳೆಯರು. ಇವರೆಲ್ಲರೂ ಸೇರಿ ಯೋಗಿ ಕೊಳ್ಳದಲ್ಲಿ ಕೊಲೆ ಮಾಡಿದ್ದಾರೆ.
4 ದಿನ ಮೊದಲು ಶಫತ್ 50 ಸಾವಿರ ರೂ ಪಡೆದು ಮೂವರೂ ಹಂಚಿಕೊಂಡಿದ್ದರು. ಇವರಿಂದ 10 ಸಾವಿರ ರೂ. ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
Laxmi News 24×7